alex Certify ಅಂಗಾಂಗ ದಾನ ಮಾಡಿದ ಬಿಗ್ ಬಿ ಅಮಿತಾಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗಾಂಗ ದಾನ ಮಾಡಿದ ಬಿಗ್ ಬಿ ಅಮಿತಾಬ್

ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅವರು ಫೋಟೋಗಳನ್ನು ಹಾಗೂ ತಂದೆಯ ಮಾತುಗಳನ್ನು ಹಂಚಿಕೊಳ್ತಿರುತ್ತಾರೆ. ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸುವ ಅಮಿತಾಬ್ ಬಚ್ಚನ್ ಈಗ ಮಹತ್ವದ ಘೋಷಣೆ ಮಾಡಿದ್ದಾರೆ.

ಅಮಿತಾಬ್ ಬಚ್ಚನ್ ಅಂಗಾಂಗ ದಾನ ಮಾಡುವ ಘೋಷಣೆ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಈ ವಿಷ್ಯವನ್ನು ಅಮಿತಾಬ್ ಹಂಚಿಕೊಂಡಿದ್ದಾರೆ. ಅಂಗಿ ಮೇಲೆ ಹಸಿರು ರಿಬ್ಬನ್ ಧರಿಸಿರುವ ಅಮಿತಾಬ್, ನಾನು ಅಂಗಾಂಗ ದಾನ ಮಾಡ್ತಿದ್ದೇನೆ. ಅದ್ರ ಪವಿತ್ರತೆಗಾಗಿ ಈ ರಿಬ್ಬನ್ ಧರಿಸಿದ್ದೇನೆ ಎಂದಿದ್ದಾರೆ.

ಅನೇಕ ಅಭಿಮಾನಿಗಳು ಅಮಿತಾಬ್ ನಡೆದ ದಾರಿಯಲ್ಲಿ ನಡೆಯುತ್ತಾರೆ. ಅಮಿತಾಬ್ ಟ್ವೀಟ್ ನಂತ್ರ ಕೆಲ ಅಭಿಮಾನಿಗಳು ತಮ್ಮ ದಾನದ ಪ್ರಮಾಣ ಪತ್ರವನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲ ಅಭಿಮಾನಿಗಳು ತಾವೂ ಅಂಗಾಂಗ ದಾನ ಮಾಡುವುದಾಗಿ ಹೇಳಿದ್ದಾರೆ.

ಸದ್ಯ ಕೊರೊನಾ ಮಾಧ್ಯೆಯೂ ಅಮಿತಾಬ್ ಬ್ಯುಸಿಯಾಗಿದ್ದಾರೆ. ಕೌನ್ ಬನೇಗಾ ಕರೋಡಪತಿ, ಬ್ರಹ್ಮಾಸ್ತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...