alex Certify ಪ್ರೀತಿ ಬಲೆಗೆ ಬಿದ್ದ ಪುತ್ರಿಯಿಂದ ಘೋರ ಕೃತ್ಯ: ಪ್ರಿಯಕರನಿಗೆ ಹೇಳಿ ತಂದೆಯ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿ ಬಲೆಗೆ ಬಿದ್ದ ಪುತ್ರಿಯಿಂದ ಘೋರ ಕೃತ್ಯ: ಪ್ರಿಯಕರನಿಗೆ ಹೇಳಿ ತಂದೆಯ ಕೊಲೆ

ಬೆಂಗಳೂರು: ಪ್ರೀತಿಗೆ ವಿರೋಧ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿಸಿದ್ದಾಳೆ.

ಯಲಹಂಕ ನ್ಯೂಟೌನ್ ಅಟ್ಟೂರು ಬಡಾವಣೆಯ 46 ವರ್ಷದ ದೀಪಕ್ ಕುಮಾರ್ ಸಿಂಗ್ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಬಿಹಾರ ಮೂಲದ ದೀಪಕ್ ಕುಮಾರ್ ಸಿಂಗ್ ಜಿಕೆವಿಕೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ 17 ವರ್ಷದ ಪುತ್ರಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ.

ಆಕೆ ಪ್ರೀತಿಯ ಬಲೆಗೆ ಬಿದ್ದಿರುವುದನ್ನು ತಿಳಿದ ದೀಪಕ್ ಕುಮಾರ್ ಮಗಳಿಗೆ ಬುದ್ಧಿವಾದ ಹೇಳಿ ಥಳಿಸಿದ್ದಾರೆ. ಈ ವಿಷಯವನ್ನು ತನ್ನ ಪ್ರಿಯಕರನಿಗೆ ಹೇಳಿದ ಮಗಳು ತನ್ನ ತಾಯಿ ಊರಿಗೆ ಹೋಗುತ್ತಿದ್ದಂತೆ ಮನೆಯಲ್ಲಿ ಒಬ್ಬರೇ ಇರುವ ತಂದೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ.

ಪ್ರಿಯಕರ ತನ್ನ ಮೂವರು ಸಹಚರರೊಂದಿಗೆ ಸೇರಿ ಭಾನುವಾರ ರಾತ್ರಿ 12 ಗಂಟೆ ವೇಳೆಗೆ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದೀಪಕ್ ಕುಮಾರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಯಲಹಂಕ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...