alex Certify ಕೋಪಗೊಂಡ ಪತ್ನಿ, ಪತಿ ತಲೆಗೆ ಹೊಡೆದು ಮಾಡಿದ್ಲು ಯಡವಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಪಗೊಂಡ ಪತ್ನಿ, ಪತಿ ತಲೆಗೆ ಹೊಡೆದು ಮಾಡಿದ್ಲು ಯಡವಟ್ಟು

ಲಾಕ್ ಡೌನ್ ಮಧ್ಯೆಯೇ ದೇಶದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗ್ತಿವೆ. ದಂಪತಿ ಮನೆಯಲ್ಲಿಯೇ ಇರುವ ಕಾರಣ ಸಣ್ಣ ವಿಚಾರಕ್ಕೂ ಇಬ್ಬರ ಮಧ್ಯೆ ಜಗಳವಾಗ್ತಿರುವ ಪ್ರಕರಣ ಕೇಳಿ ಬರ್ತಿದೆ. ಮಾಟೂರ್ ಗ್ರಾಮದಲ್ಲಿ ಪತಿ-ಪತ್ನಿ ಜಗಳ ಸಾವಿನಲ್ಲಿ ಕೊನೆಗೊಂಡಿದೆ. ಪತಿ-ಪತ್ನಿ ಮಧ್ಯೆ ಜಗಳ ನಡೆದಿದೆ. ಪತಿ ಬೆಲ್ಟ್ ನಲ್ಲಿ ಪತ್ನಿಗೆ ಹೊಡೆದಿದ್ದಾನೆ. ಕೋಪಗೊಂಡ ಪತ್ನಿ ತವಾ ತೆಗೆದು ಪತಿ ತಲೆಗೆ ಹೊಡೆದಿದ್ದಾಳೆ.

ಘಟನೆ ನಂತ್ರ ಇಬ್ಬರೂ ಸರಿಯಾಗಿದ್ದರು. ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡಿದ್ದರು. ಆದ್ರೆ ರಾತ್ರಿ ಮಲಗಿದ್ದ ಪತಿ ಮೇಲೆ ಏಳಲಿಲ್ಲ. ಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಧ್ಯರಾತ್ರಿ ಮಗಳಿಗೆ ಹಾಲು ಕೊಡಲು ಮುಂದಾದ ಪತ್ನಿ ಪತಿಯನ್ನು ಎಬ್ಬಿಸಿದ್ದಾಳೆ. ಆದ್ರೆ ಪತಿ ಏಳಲಿಲ್ಲ ಎನ್ನಲಾಗಿದೆ. ಆತಂಕಗೊಂಡ ಪತ್ನಿ, ಕುಟುಂಬಸ್ಥರಿಗೆ ಸುದ್ದಿ ತಿಳಿಸಿದ್ದಾಳೆ. ಪತಿ ತಲೆಯೊಳಗೆ ಗಂಭೀರ ಗಾಯವಾಗಿದ್ದು ಸಾವಿಗೆ ಕಾರಣವೆನ್ನಲಾಗಿದೆ. ತವಾದಿಂದ ತಲೆಗೆ ಹೊಡೆದ ಕಾರಣ ತಲೆಯೊಳಗೆ ಗಂಭೀರ ಗಾಯವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...