HomeIndia1 ಹೆದ್ದಾರಿ 3 ರಾಜ್ಯಕ್ಕೆ ಸಂಪರ್ಕ: ಬೆಂಗಳೂರಿಗೆ ಬಿಗ್ ಗಿಫ್ಟ್‌, 2027ಕ್ಕೆ ಹೆದ್ದಾರಿ ಲೋಕಾರ್ಪಣೆ

1 ಹೆದ್ದಾರಿ 3 ರಾಜ್ಯಕ್ಕೆ ಸಂಪರ್ಕ: ಬೆಂಗಳೂರಿಗೆ ಬಿಗ್ ಗಿಫ್ಟ್‌, 2027ಕ್ಕೆ ಹೆದ್ದಾರಿ ಲೋಕಾರ್ಪಣೆ

ಮೂರು ರಾಜ್ಯ ಸಂಪರ್ಕಿಸುವ 1 ಹೆದ್ದಾರಿ 2027ರಲ್ಲಿ ಲೋಕಾರ್ಪಣೆಯಾಗಲಿದೆ. ಇದು ಬೆಂಗಳೂರು ನಗರಕ್ಕೆ ಬಹುದೊಡ್ಡ ಕೊಡುಗೆಯಾಗಲಿದೆ. 2024ರಲ್ಲಿ ಉದ್ಘಾಟನೆಯಾಗಬೇಕಿದ್ದ ಹೆದ್ದಾರಿಯ ಗಡುವು 2026ರ ಜೂನ್‌ಗೆ ಮುಂದೂಡಲಾಗಿತ್ತು. ಕೆಲವು ರಾಜ್ಯಗಳಲ್ಲಿ ಕಾಮಗಾರಿಗಳು ಬಾಕಿ ಇರುವ ಕಾರಣಕ್ಕೆ ಯೋಜನೆ ತಡವಾಗುತ್ತಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಬಹುದೊಡ್ಡ ಹೆದ್ದಾರಿ ಯೋಜನೆಯಾಗಿದೆ. 263 ಕಿ.ಮೀ. ರಸ್ತೆ ಯೋಜನೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮೂಲಕ ಸಾಗಲಿದ್ದು ಮೂರು ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ.

ಯೋಜನೆ ವಿವರ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಯೋಜನೆ ಕರ್ನಾಟಕದಲ್ಲಿ 71.7 ಕಿ.ಮೀ., ಆಂಧ್ರ ಪ್ರದೇಶದಲ್ಲಿ 85 ಕಿ.ಮೀ. ಮತ್ತು ತಮಿಳುನಾಡು ರಾಜ್ಯದಲ್ಲಿ 106 ಕಿ.ಮೀ. ಒಳಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕದಲ್ಲಿ 71.7 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರ ಪ್ರಾಯೋಗಿಕವಾಗಿ ನಡೆಯುತ್ತಿದೆ. ಆಂಧ್ರ ಪ್ರದೇಶದಲ್ಲಿ ಯೋಜನೆ 78.5 ಕಿ.ಮೀ. ಪೂರ್ಣಗೊಂಡಿದೆ. ತಮಿಳುನಾಡಿನಲ್ಲಿ ಕಾಮಗಾರಿ ಪೂರ್ಣಗೊಂಡಿರುವುದು 84.7 ಕಿ.ಮೀ. ಮಾತ್ರ.

ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಈ ವರ್ಷದ ಜೂನ್‌ನಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿವೆ. ಜೂನ್‌ 2026ಕ್ಕೆ ಕಾಮಗಾರಿ ಪೂರ್ಣವಾದರೆ ಅಗತ್ಯವಾದ ಪರೀಕ್ಷೆಗಳ ನಂತರ ಎಕ್ಸ್‌ಪ್ರೆಸ್ ವೇಯನ್ನು 2027ರಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ.

ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಾಗುವಂತೆ ಹೆದ್ದಾರಿಯನ್ನು ವಿನ್ಯಾಸ ಮಾಡಲಾಗಿದೆ. ಈ ಮಾರ್ಗ ಲೋಕಾರ್ಪಣೆಯಾದರೆ ಬೆಂಗಳೂರು-ಚೆನ್ನೈ ನಡುವಿನ 6 ಗಂಟೆಗಳ ಪ್ರಯಾಣದ ಅವಧಿ 2 ಗಂಟೆಗೆ ಇಳಿಕೆಯಾಗಲಿದೆ.

ಸದ್ಯ ಬೆಂಗಳೂರು-ಚೆನ್ನೈ ವಾಹನಗಳು ಹೊಸೂರು, ಕೃಷ್ಣಗಿರಿ, ವೆಲ್ಲೂರು ಮೂಲಕ ಸಾಗುತ್ತಿದ್ದು, 340 ಕಿ.ಮೀ. ದೂರವಾಗುತ್ತಿದೆ. ಆದರೆ ಈ ಎಕ್ಸ್‌ಪ್ರೆಸ್ ವೇ 263 ಕಿ.ಮೀ. ಮಾತ್ರ ಆಗಲಿದ್ದು, ಪ್ರಯಾಣದ ಅವಧಿ ಕಡಿತವಾಗಲಿದೆ.

ತಮಿಳುನಾಡು ರಾಜ್ಯದಲ್ಲಿ 25.5 ಕಿ.ಮೀ. ರಸ್ತೆಯ ಅರಕ್ಕೋಣಂ-ಕಾಂಚಿಪುರಂ ಪೂರ್ಣಗೊಳಿಸುವುದು ಸವಾಲಾಗಿದೆ. 2025ರ ಮೇ ತಿಂಗಳಿನಿಂದ ಈ ವಿಭಾಗದ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಮಾಹಿತಿ ನೀಡಿದ್ದರು.

ಈ ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಗೊಂಡರೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಭೂ ಸ್ವಾಧೀನ, ಅರಣ್ಯ ತೆರವು ಮತ್ತು ತಾಂತ್ರಿಕ ತೊಂದರೆಗಳಿಂದಾಗಿ ಯೋಜನೆಯು ವಿಳಂಬವಾಗಿತ್ತು. ಆದರೆ ಈಗ ಎಲ್ಲಾ ತೊಂದರೆ ಬಗೆಹರಿಸಲಾಗಿದ್ದು, ಕಾಮಗಾರಿಯನ್ನು ಪುನಃ ಆರಂಭಿಸಲಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೇಶದಲ್ಲಿ 26 ಹೊಸ ಹಸಿರು ಎಕ್ಸ್‌ಪ್ರೆಸ್‌ ವೇಗಳನ್ನು ನಿರ್ಮಾಣ ಮಾಡುತ್ತಿದೆ. ಇದರಲ್ಲಿ ಬೆಂಗಳೂರು-ಚೆನ್ನೈ ಕಾರಿಡಾರ್ ಸಹ ಒಂದಾಗಿದೆ. 4 ಪಥದ ಎಕ್ಸ್‌ಪ್ರೆಸ್ ವೇ ಮತ್ತು 2 ಪಥದ ಸರ್ವೀಸ್ ರಸ್ತೆಯನ್ನು ಇದು ಒಳಗೊಂಡಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular