alex Certify ಯಾವ ರಾಶಿಯವರನ್ನು ಕಾಡ್ತಿದೆ ಸಾಡೇಸಾತಿ ಶನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ರಾಶಿಯವರನ್ನು ಕಾಡ್ತಿದೆ ಸಾಡೇಸಾತಿ ಶನಿ

ಶನಿ ದೇವ ಕೆಲವೇ ದಿನಗಳಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಶನಿ ಜನವರಿ 24, 2020 ರಿಂದ ಮಕರ ರಾಶಿಯಲ್ಲಿದ್ದಾನೆ. ಮಕರ ರಾಶಿ ಶನಿಯ ಸ್ವಂತ ರಾಶಿ. ಶನಿ ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಯನ್ನು ಪ್ರವೇಶಿಸಿದಾಗ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅನೇಕ ರೀತಿಯ ತೊಂದರೆಗಳು, ಕಾಯಿಲೆಗಳು ಶುರುವಾಗುತ್ತವೆ.

ಧನು ರಾಶಿಯವರಿಗೆ ಸಾಡೇಸಾತಿ ಶನಿ ನಡೆಯುತ್ತಿದೆ. ಇದು ಕೊನೆ ಚರಣದಲ್ಲಿದೆ. ಸಾಡೇಸಾತಿ ಮೂರು ಚರಣದಲ್ಲಿರುತ್ತದೆ. ಸಾಮಾನ್ಯವಾಗಿ ಕೊನೆ ಚರಣ ಹೆಚ್ಚು ನಷ್ಟವನ್ನುಂಟು ಮಾಡುವುದಿಲ್ಲ. ಆದ್ರೆ ಜೀವನದಲ್ಲಿ ಕೆಲ ಸಮಸ್ಯೆ ಕಾಡುತ್ತದೆ. 2023ರಲ್ಲಿ ಧನು ರಾಶಿಯವರಿಗೆ ಸಾಡೇಸಾತಿ ಶನಿ ಮುಗಿಯಲಿದೆ.

ದೊಡ್ಡ ನಷ್ಟದ ‘ಮುನ್ಸೂಚನೆ’ ನೀಡುತ್ತೆ ಈ ಘಟನೆ

ಮಕರ ರಾಶಿಯವರಿಗೆ ಸಾಡೇಸಾತಿ ಶನಿ ಎರಡನೇ ಚರಣದಲ್ಲಿದೆ. ಇದೇ ಕಾರಣಕ್ಕೆ ಸರಿಯಾದ ಸಮಯಕ್ಕೆ ಕೆಲಸ ಪೂರ್ಣಗೊಳ್ಳುವುದಿಲ್ಲ. ರೋಗ ಕಾಡಲಿದೆ. ಆರ್ಥಿಕ ನಷ್ಟವುಂಟಾಗಲಿದೆ. 2025ರಲ್ಲಿ ಶನಿ ಇವರನ್ನು ಬಿಡಲಿದ್ದಾನೆ.

ಕುಂಭ ರಾಶಿಯವರಿಗೆ ಸಾಡೇಸಾತಿ ಶನಿ ಈಗಷ್ಟೆ ಶುರುವಾಗಿದೆ. ಇದೇ ಕಾರಣಕ್ಕೆ ಈ ರಾಶಿಯವರು ಸಾಕಷ್ಟು ಸಂಕಷ್ಟ ಎದುರಿಸಲಿದ್ದಾರೆ. ಸಾಡೇಸಾತಿ ಶನಿ ಜನವರಿ 23, 20208ರವರೆಗೆ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...