ಚಿಕ್ಕಚಿಕ್ಕ ಎಡವಟ್ಟುಗಳು ದೊಡ್ಡ ದೊಡ್ಡ ಅವಾಂತರವನ್ನ ಸೃಷ್ಟಿ ಮಾಡಿ ಬಿಡುತ್ತೆ. ಅದು ಕೆಲವೊಮ್ಮೆ ತಮಾಷೆ ಅಂತ ಅನಿಸಿದರೆ, ಇನ್ನು ಕೆಲವೊಮ್ಮೆ ಜೀವಕ್ಕೆ ಕುತ್ತು ತಂದಿಟ್ಟಿರುತ್ತೆ. ಯುನೈಟೆಡ್ ಸ್ಟೇಟ್ಸ್ನ ನ್ಯೂಸ್ ಟಿವಿ ಸ್ಟೇಷನ್ನಲ್ಲಿ ಒಂದು ಚಿಕ್ಕ ಎಡವಟ್ಟು ನಡೆದಿದೆ. ಇದರಿಂದ ಈ ಸುದ್ದಿವಾಹಿನಿಗೆ ಇ-ಮೇಲ್ ಸುರಿಮಳೆಯೇ ಆಗಿದೆ. ಪ್ರತಿಯೊಂದು ಮೇಲ್ ವೆರೈಟಿ ವೆರೈಟಿ ತಿಂಡಿಗಳ ಬೇಡಿಕೆಯ ಇ-ಮೇಲ್ಗಳ ಸುರಿಮಳೆಯೇ ಇಲ್ಲಿ ಆಗಿದೆ.
ಇದೇ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುವ ಪತ್ರಕರ್ತ ಡೇವಿಡ್ ಹೊಡ್ಜಸ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಈ ಒಂದು ತಮಾಷೆಯ ಘಟನೆಯನ್ನ ಹಂಚಿಕೊಂಡಿದ್ದಾರೆ.
‘ನಮ್ಮ ಸುದ್ದಿವಾಹಿನಿಯ ಇ-ಮೇಲ್ ಬಾಕ್ಸ್ಗೆ ರಾಶಿ-ರಾಶಿಯಾಗಿ ಮೇಲ್ಗಳು ಬರ್ತಿವೆ. ಪ್ರತಿಯೊಂದು ಮೇಲ್ನಲ್ಲೂ ವಿಶೇಷ ತಿಂಡಿಗಳ ಬೇಡಿಕೆ ಇಟ್ಟಿದ್ದಾರೆ. ತಮಾಷೆಯ ವಿಚಾರ ಏನಂದರೆ ಈ ಎಲ್ಲ ಮೇಲ್ಗಳು ಕೈರೊಲನಿ ಸ್ಟೇಟ್ನಿಂದ WBTV ಟಿವಿ ಸ್ಟೇಷನ್ಗೆ ಬರ್ತಿವೆ.‘
SHOCKING NEWS: ಸೋಲಾರ್ ಲೈಟ್ ಕಂಬಕ್ಕೆ ದನದ ಕೊಂಬು ಕಟ್ಟಿ ವಿಕೃತಿ; ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕ ಆಕ್ರೋಶ
ಡೇವಿಡ್ ಹೊಡ್ಜಸ್ ಪ್ರಕಾರ ಇವರ ಕಂಪನಿಯ ಸಿಬ್ಬಂದಿ ಆಕಸ್ಮಿಕವಾಗಿ ತಮ್ಮ ಕಿಚನ್ನಲ್ಲಿ Little Debbie ಇದೆ. ಇದರಲ್ಲಿ ವಿಶೇಷ ಖಾದ್ಯಗಳಿವೆ, ಇದು ಯಾರಿಗೆ ಬೇಕು ಬೇಗ ತಿಳಿಸಿ ಅನ್ನೋ ಸುದ್ದಿಯನ್ನ ತಮ್ಮ ವೆಬ್ಸೈಟ್ನಲ್ಲಿ ಹಾಕಿದ್ದಾರೆ. ಇದರ ಪರಿಣಾಮ ಜನರು ತಮಗೆ ಬೇಕಾಗಿರೋ ತಿಂಡಿಗಳ ಲಿಸ್ಟ್ನ್ನ ಒಂದೇ ಸಮನೆ ಮೇಲ್ ಮಾಡುತ್ತಿದ್ದಾರೆ. ಅಷ್ಟೆ ಅಲ್ಲ ಸ್ಟಾರ್ ಕೇಕ್, ಜಿಬ್ರಾ ಕೇಕ್ ಸೇರಿದಂತೆ ವೆರೈಟಿ ವೆರೈಟಿ ತಿಂಡಿಗಳ ಬೇಡಿಕೆಯನ್ನ ಮುಂದಿಟ್ಟಿದ್ದಾರೆ. ಈ ಘಟನೆ ಜನರ ಗಮನ ಸೆಳೆದಿದ್ದು, ಟ್ವಿಟರ್ನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇನ್ನು ಕೆಲವರು ಈ ಘಟನೆಯನ್ನ ತಮಾಷೆಯಾಗಿ ತೆಗೆದುಕೊಂಡು, ಅದಕ್ಕೆ ಫನ್ನಿ ಫನ್ನಿಯಾಗಿ ಕಮೆಂಟ್ ಹಾಕುತ್ತಿದ್ದಾರೆ. ಸದಾ ಗಂಭೀರ ಸುದ್ದಿಗಳನ್ನ ಕೊಡುವ ಸುದ್ದಿವಾಹಿನಿ ಈ ರೀತಿ ಎಡವಟ್ಟಿನಿಂದ ಅದೇ ಸುದ್ದಿಯಲ್ಲಿರೋದು ವಿಶೇಷ.