alex Certify ಪುಟ್ಟ ಕಂದನನ್ನು ತೋಳಿನಲ್ಲಿ ಹಿಡಿದುಕೊಂಡು ಹವಾಮಾನ ವರದಿ ಓದಿದ ಸುದ್ದಿ ನಿರೂಪಕಿ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಕಂದನನ್ನು ತೋಳಿನಲ್ಲಿ ಹಿಡಿದುಕೊಂಡು ಹವಾಮಾನ ವರದಿ ಓದಿದ ಸುದ್ದಿ ನಿರೂಪಕಿ…! ವಿಡಿಯೋ ವೈರಲ್

ವರ್ಕ್ ಫ್ರಮ್ ಹೋಮ್ ಎಂಬ ಪರಿಕಲ್ಪನೆ ಕಾಲಿಟ್ಟ ನಂತರ ಬಹುತೇಕ ಮಂದಿ ಇಂದಿಗೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳು ವಿಡಿಯೋ ಕಾನ್ಫರೆನ್ಸ್ ಮಾಡುತ್ತಿರಬೇಕಾದ್ರೆ ಮನೆಯಲ್ಲಿ ನಡೆಯುವ ಕೆಲವು ವಿಲಕ್ಷಣ, ತಮಾಷೆಯಂತಹ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನಿಮ್ಮ ಖಂಡಿತಾ ನಿಮ್ಮ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ.

ಹೌದು, ಸುದ್ದಿ ನಿರೂಪಕಿಯು ತನ್ನ ಪುಟ್ಟ ಕಂದಮ್ಮನ ಜೊತೆಗೆ ಹವಾಮಾನ ಮುನ್ಸೂಚನೆ ಓದಿರುವ ವಿಡಿಯೋ ವೈರಲ್ ಆಗಿದೆ. ಯುಎಸ್‌ನ ವಿಸ್ಕಾನ್ಸಿನ್‌ನ ರೆಬೆಕ್ಕಾ ಶುಲ್ಡ್, ಸಿಬಿಎಸ್ 58 ನ್ಯೂಸ್‌ನಲ್ಲಿ ಹವಾಮಾನ ಮುನ್ಸೂಚನೆ ಓದುತ್ತಿರುವಾಗ ತನ್ನ ಮೂರು ತಿಂಗಳ ಮಗುವನ್ನು ತೋಳುಗಳಲ್ಲಿ ಹಿಡಿದುಕೊಂಡು ನಿರೂಪಿಸಿದ್ದಾರೆ.

ಈ ಆರಾಧ್ಯ ಕ್ಷಣದ ವಿಡಿಯೋಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಟ್ವಿಟ್ಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಸಾವಿರಾರು ವೀಕ್ಷಕರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಇದು ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ.

42 ವರ್ಷದ ರೆಬೆಕಾ ಶುಲ್ಡ್ ತನ್ನ ಮಾತೃತ್ವ ರಜೆ ಮುಗಿದ ನಂತರ ಕೋವಿಡ್-ಸಂಬಂಧಿತ ನಿರ್ಬಂಧಗಳಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮನೆಯಿಂದ ಕೆಲಸ ಮಾಡುವಾಗ, ಚಾನೆಲ್‌ಗಾಗಿ ಹವಾಮಾನ ವರದಿಯನ್ನು ಪ್ರಸ್ತುತಪಡಿಸಲು ಮುಂದಾದಾಗ ನಿದ್ದೆ ಮಾಡುತ್ತಿದ್ದ ಮಗು ಎಚ್ಚರಗೊಂಡಿದೆ. ಹೀಗಾಗಿ ತನ್ನ ಪುಟ್ಟ ಕಂದನನ್ನು ಹಿಡಿದುಕೊಂಡು ಹವಾಮಾನ ವರದಿಯನ್ನು ಪ್ರಸ್ತುತಪಡಿಸಿದ್ದಾರೆ.

— Rebecca Schuld (@RebeccaSchuld) January 29, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...