alex Certify ಸಾಂಪ್ರದಾಯಿಕ ಹಚ್ಚೆಯೊಂದಿಗೆ ಆನ್ ಸ್ಕ್ರೀನ್ ನಲ್ಲಿ ಸುದ್ದಿ ಓದಿದ ನಿರೂಪಕಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂಪ್ರದಾಯಿಕ ಹಚ್ಚೆಯೊಂದಿಗೆ ಆನ್ ಸ್ಕ್ರೀನ್ ನಲ್ಲಿ ಸುದ್ದಿ ಓದಿದ ನಿರೂಪಕಿ……!

ಹತ್ತು ವರ್ಷಗಳ ಹಿಂದೆ ಇದ್ದ ಸುದ್ದಿವಾಹಿನಿಗಳಿಗೂ, ಪ್ರಸ್ತುತ ಇರುವ ಸುದ್ದಿವಾಹಿನಿಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. 24*7 ಸುದ್ದಿವಾಹಿನಿಗಳು ಬಂದ ಮೇಲಂತೂ ಆಂಕರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಂತೂ ಸುದ್ದಿ ಮಾಧ್ಯಮವು ಬಹಳಷ್ಟು ಬದಲಾಗುತ್ತಿದೆ. ಇದಕ್ಕೆ ಈಗ ವೈರಲ್ ಆಗಿರುವ ವಿಡಿಯೋವೇ ಸಾಕ್ಷಿ.

ಹೌದು, ನ್ಯೂಸ್ ಆಂಕರ್ ಒಬ್ಬರು ಸಾಂಪ್ರದಾಯಿಕ ಮಾವೋರಿ ಮುಖದ ಹಚ್ಚೆಯೊಂದಿಗೆ ಆನ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದ್ದಾರೆ. ನ್ಯೂಜಿಲೆಂಡ್‌ನ ಪತ್ರಕರ್ತೆ ಈ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಕೆಳ ಗಲ್ಲದ ಮೇಲೆ ಹಚ್ಚೆಯನ್ನು ಹಾಕಲಾಗಿದೆ. ಇದನ್ನು ಮೊಕೊ ಕೌಯೆ ಎಂದು ಕರೆಯಲಾಗುತ್ತದೆ.

ಸೋಮವಾರ 37 ವರ್ಷದ ಸುದ್ದಿ ನಿರೂಪಕಿ ನ್ಯೂಸ್‌ಹಬ್ ಲೈವ್‌ನ ಸಂಜೆ 6 ಗಂಟೆಯ ಸುದ್ದಿ ಬುಲೆಟಿನ್ ಓದಿದ್ದಾರೆ. ಈ ವೇಳೆ ಈಕೆ ಹಾಕಿಸಿಕೊಂಡಿದ್ದ ಹಚ್ಚೆಯನ್ನು ಕಂಡು ಎಲ್ಲರೂ ಹುಬ್ಬೇರಿಸಿದ್ದಾರೆ. ಈ ಮೂಲಕ ನಾಲ್ಕು ಮಕ್ಕಳ ತಾಯಿಯಾಗಿರುವ ಇವರು ತಮ್ಮ ಜೀವಮಾನದ ಕನಸನ್ನು ನನಸಾಗಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...