ದೃಷ್ಟಿಭ್ರಮಣೆಯ ಚಿತ್ರಗಳು ನೋಡಲು ಭಾರೀ ಮಜವಾಗಿರುತ್ತವೆ. ಮೆದುಳಿಗೆ ಸಖತ್ ಕೆಲಸ ಕೊಡುವ ಈ ಚಿತ್ರಗಳ ಮರ್ಮ ಅರಿಯುವುದೇ ಭಾರೀ ಸವಾಲು.
ಇಂಥದ್ದೇ ಒಂದು ಚಿತ್ರದಲ್ಲಿ, ಎರಡು ವರ್ಣರಂಜಿತ ವೃತ್ತಗಳನ್ನು ನೀಡಲಾಗಿದ್ದು, ಅವುಗಳ ಒಳಗೆ ಬಾಣಗಳನ್ನು ಬರೆಯಲಾಗಿದೆ. ಈ ವೃತ್ತಗಳು ಪರದೆ ಮೇಲೆ ಓಡುತ್ತಿರುವಂತೆ ಕಾಣುತ್ತಿವೆ. ನೀವು ಅವನ್ನು ದಿಟ್ಟಿಸಿ ನೋಡಿದರೆ, ಹತ್ತರಲ್ಲಿ ಒಂಬತ್ತು ಬಾರಿ ಈ ವೃತ್ತಗಳು ಓಡುತ್ತಿವೆ ಎಂದು ನಿಮ್ಮ ಮೆದುಳು ಗ್ರಹಿಸುತ್ತದೆ.
ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ವದಂತಿ ಕುರಿತು ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟನೆ
ಜಪಾನೀ ಟ್ವಿಟರ್ ಬಳಕೆದಾರ ಜಾಗರಿಕಿನ್ ಶೇರ್ ಮಾಡಿದ ಈ ಚಿತ್ರವನ್ನು ನೋಡಿದ ಸಾವಿರಾರು ನೆಟ್ಟಿಗರು ತಮ್ಮ ತಲೆ ಕೆರೆದುಕೊಳ್ಳುತ್ತಿದ್ದಾರೆ.
ಜಿಐಎಫ್ ಮಾದರಿಯ ಈ ಚಿತ್ರದಲ್ಲಿ ಬಾಣಗಳ ದಿಕ್ಕು ನಿಮ್ಮನ್ನು ಆಲೋಚನೆಗೆ ಇಳಿಸಿದರೆ, ಇದೇ ವೇಳೆ, ಚಕ್ರಗಳಲ್ಲಿರುವ ಬಣ್ಣಗಳು ನಿರಂತರ ಬದಲಾಗುತ್ತಿರುವಂತೆ ಕಾಣುತ್ತವೆ.