alex Certify ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ

ಮೈಕ್ರೋಸಾಫ್ಟ್ ನ ಬಿಲಿಯನೇರ್ ಸಂಸ್ಥಾಪಕ ಬಿಲ್ ಗೇಟ್ಸ್ ಒಂದು ದಶಕದ ಹಿಂದೆ ಮಹಿಳಾ ಉದ್ಯೋಗಿಗೆ ಫ್ಲರ್ಟಿ, ಅಸಂಬದ್ಧ ಇಮೇಲ್ ಗಳನ್ನು ಕಳುಹಿಸುತ್ತಿದ್ದರಂತೆ. ಈ ರೀತಿ ಮೆಸೇಜ್ ಕಳುಹಿಸಬಾರದು ಅಂತಾ ಮಹಿಳಾ ಉದ್ಯೋಗಿ ಮನವಿ ಮಾಡಿದ್ದರು ಎಂಬ ಆಘಾತಕಾರಿ ಮಾಹಿತಿ ಇದೀಗ ಬಹಿರಂಗವಾಗಿದೆ.

ದಿ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಸೋಮವಾರ ಪ್ರಕಟವಾದ ವರದಿಯು, ಗೇಟ್ಸ್ ಸಿಇಒ ಆಗಿದ್ದಾಗ ಮತ್ತು ಮೆಲಿಂಡಾ ಗೇಟ್ಸ್ ಅವರನ್ನು ಮದುವೆಯಾದ ನಂತರ ಮಹಿಳಾ ಉದ್ಯೋಗಿಗೆ ಫ್ಲರ್ಟ್ ಮೇಲ್‌ಗಳನ್ನು ಕಳುಹಿಸಿದ್ದಾರೆ ಎಂದು ಹೇಳಿದೆ.

RSS ಶಾಖೆಯಲ್ಲಿ ಕಲಿತವರು ವಿಧಾನಸಭೆಯಲ್ಲಿ ಮಾಡಿದ್ದೇನು ? ಸದನದಲ್ಲಿ ನೀಲಿಚಿತ್ರ ನೋಡುವುದನ್ನು ಕಲಿಸಿದ್ದು ಅದೇ ಶಾಖೆ ತಾನೆ ? ಸಂಘ ಪರಿವಾರದ ವಿರುದ್ಧ ಮತ್ತೆ ಕಿಡಿಕಾರಿದ HDK

ಮೆಲಿಂಡಾ ಗೇಟ್ಸ್ ಮೇ ತಿಂಗಳಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಕೆಲವು ತಿಂಗಳ ನಂತರ ಗೇಟ್ಸ್ ಬಗೆಗಿನ ಈ ವಿಚಾರ ಬಹಿರಂಗವಾಗಿದೆ. ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ವಿಚ್ಛೇದನ ಆಗಸ್ಟ್ ನಲ್ಲಿ ಅಂತಿಮಗೊಂಡಿದೆ.

ಹೆಸರಿಸದ ಮೂಲಗಳು ವಾಲ್ ಸ್ಟ್ರೀಟ್ ಜರ್ನಲ್‌ಗೆ ಇಬ್ಬರು ಉನ್ನತ ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕರು, ಪ್ರಸ್ತುತ ಅಧ್ಯಕ್ಷರಾದ ಬ್ರಾಡ್ ಸ್ಮಿತ್ ಮತ್ತು ಆಗ ಮಾನವ ಸಂಪನ್ಮೂಲ ಮುಖ್ಯಸ್ಥೆಯಾಗಿದ್ದ ಲಿಸಾ ಬ್ರಮ್ಮೆಲ್ ಅವರು ಗೇಟ್ಸ್‌ನೊಂದಿಗೆ ಸಭೆ ನಡೆಸಿದ್ದರು. ಹಾಗೂ ಫ್ಲರ್ಟ್ ಮೇಲ್‌ಗಳನ್ನು ಕಳುಹಿಸದಂತೆ ಕೇಳಿಕೊಂಡಿದ್ದರು. ‌

ಗರ್ಭಿಣಿಯಾಗುವ ಚಟಕ್ಕೆ ಬಿದ್ದ ಮಹಿಳೆ…! 8 ಮಕ್ಕಳಿರುವ ಈಕೆಗೆ ಬೇಕಂತೆ ಮತ್ತಷ್ಟು ಮಕ್ಕಳು

ವರದಿಗಳ ಪ್ರಕಾರ, ಮಹಿಳಾ ಉದ್ಯೋಗಿಗಳಿಗೆ ಫ್ಲರ್ಟಿ ಮೇಲ್‌ಗಳನ್ನು ಕಳುಹಿಸುವುದು ಒಳ್ಳೆಯದಲ್ಲ ಎಂಬುದನ್ನು ಗೇಟ್ಸ್ ಒಪ್ಪಿಕೊಂಡಿದ್ದರಲ್ಲದೇ ಮುಂದೆ ಮತ್ತೆ ಇದು ಪುನಾರವರ್ತನೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದರೆಂದು ವರದಿಯಾಗಿದೆ.

ಕಂಪನಿಯು 2007 ರಲ್ಲಿ ಮಹಿಳಾ ಉದ್ಯೋಗಿಗೆ ಗೇಟ್ಸ್ ಇಮೇಲ್‌ ಕಳುಹಿಸಿರುವ ವಿಚಾರ ಗೊತ್ತಾಗಿದೆ. ಅಲ್ಲದೆ ಗೇಟ್ಸ್ ಮಹಿಳೆಯನ್ನು ಕೆಲಸದ ಹೊರಗೆ ಮತ್ತು ಕ್ಯಾಂಪಸ್‌ನ ಹೊರಗೆ ಭೇಟಿಯಾಗಲು ಆಫರ್ ನೀಡಿದ್ದರು ಎಂದು ಮೈಕ್ರೋಸಾಫ್ಟ್‌ನ ವಕ್ತಾರರು ಹೇಳಿದ್ದಾರೆ.

ʼನಿವೃತ್ತಿʼ ಬಳಿಕವೂ ಆರ್ಥಿಕವಾಗಿ ಸದೃಢರಾಗಿರಲು ನಿಮಗೆ ತಿಳಿದಿರಲಿ ಈ ವಿಷಯ

ಆದರೆ, ಇದು ನಿಜವಲ್ಲ ಸುಳ್ಳು ಸುದ್ದಿ. ಇವೆಲ್ಲಾ ಕೇವಲ ವದಂತಿಗಳಷ್ಟೇ ಎಂದು ಈ ವಿಚಾರವನ್ನು ಗೇಟ್ಸ್‌ನ ವಕ್ತಾರರಾದ ಬ್ರಿಡ್‌ಗಿಟ್ ಅರ್ನಾಲ್ಡ್ ಅಲ್ಲಗಳೆದಿದ್ದಾರೆ.

ಕೆಲವು ತಿಂಗಳುಗಳ ಹಿಂದಷ್ಟೇ, 2002 ರಲ್ಲಿ ಗೇಟ್ಸ್ ಇನ್ನೊಬ್ಬ ಮಹಿಳಾ ಉದ್ಯೋಗಿಯೊಂದಿಗೆ ‘ಅನುಚಿತ’ ಲೈಂಗಿಕ ಸಂಬಂಧ ಹೊಂದಿದ್ದರು ಎಂಬ ಬಗ್ಗೆ ವರದಿಯಾಗಿತ್ತು. ಈ ವಿಷಯವನ್ನು ಮೈಕ್ರೋಸಾಫ್ಟ್ ಬೋರ್ಡ್ ತನಿಖೆ ನಡೆಸುತ್ತಿರುವಾಗ ಮೈಕ್ರೋಸಾಫ್ಟ್ ಬಿಲಿಯನೇರ್ ರಾಜೀನಾಮೆ ನೀಡಲು ನಿರ್ಧರಿಸಿದ್ದರಂತೆ. ಇನ್ನು ಮಹಿಳಾ ಉದ್ಯೋಗಿ ಮೈಕ್ರೋಸಾಫ್ಟ್ ಬೋರ್ಡ್‌ಗೆ 2019 ರಲ್ಲಿ ಈ ಸಂಬಂಧದ ಬಗ್ಗೆ ಬರೆದಿದ್ದಾರೆ ಹಾಗೂ ಪತ್ರವನ್ನು ಓದಲು ಗೇಟ್ಸ್‌ ಪತ್ನಿ ಮೆಲಿಂಡಾ ಅವರನ್ನು ಕೇಳಿಕೊಂಡಿದ್ದರು ಎಂಬ ಬಗ್ಗೆ ವರದಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...