alex Certify ʼನಿವೃತ್ತಿʼ ಬಳಿಕವೂ ಆರ್ಥಿಕವಾಗಿ ಸದೃಢರಾಗಿರಲು ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಿವೃತ್ತಿʼ ಬಳಿಕವೂ ಆರ್ಥಿಕವಾಗಿ ಸದೃಢರಾಗಿರಲು ನಿಮಗೆ ತಿಳಿದಿರಲಿ ಈ ವಿಷಯ

ನಿವೃತ್ತಿ ಅವಧಿಯ ಬಳಿಕ ನಿಮಗೆ ಯಾವುದೇ ರೀತಿಯಲ್ಲೂ ಆರ್ಥಿಕ ಹೊರೆ ಉಂಟಾಗದಂತೆ ಪ್ಲಾನ್​ ಮಾಡುವುದು ಅತ್ಯಂತ ಮುಖ್ಯವಾದ ಕೆಲಸವಾಗಿದೆ. ಈ ರೀತಿ ಮಾಡಿದರೆ ಮಾತ್ರ ನೀವು ನಿವೃತ್ತಿ ಅವಧಿಯಲ್ಲಿ ಎಂಜಾಯ್​ ಮಾಡಬಲ್ಲಿರಿ. ಹೀಗಾಗಿ ಈ ಸಮಯದಲ್ಲಿ ನೀವು ಮಾಡಬಹುದಾದ ಕೆಲವು ಸಾಮಾನ್ಯ ತಪ್ಪುಗಳ ಬಗ್ಗೆ ವಿವರಣೆ ಇಲ್ಲಿದೆ ನೋಡಿ.

ನಿವೃತ್ತಿ ಯೋಜನೆಯನ್ನು ತಡವಾಗಿ ಆರಂಭಿಸುವುದು ಸೂಕ್ತವಲ್ಲ:

ನಿವೃತ್ತಿ ಯೋಜನೆಯನ್ನು ಮೊದಲೇ ಆರಂಭಿಸುವುದರಿಂದ ನೀವು ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ನೀವು ಹಣ ಸಂಪಾದನೆ ಮಾಡಲು ಆರಂಭಿಸಿದ ತಕ್ಷಣವೇ ಹೂಡಿಕೆ ಮಾಡಲು ಆರಂಭಿಸಿ. ಉದಾಹರಣೆಗೆ ನೀವು ನಿಮ್ಮ 40 ನೇ ವಯಸ್ಸಿನಿಂದ ನಿವೃತ್ತಿಯ ವಯಸ್ಸಿನವರೆಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಹೂಡಿಕೆ ಮಾಡಿದಲ್ಲಿ ನಿವೃತ್ತಿಯ ವೇಳೆಗೆ 24 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಇದರಿಂದ ನಿಮಗೆ ನಿವೃತ್ತಿಯ ಅವಧಿಯಲ್ಲಿ 1.52 ಕೋಟಿ ರೂಪಾಯಿ ಸಿಗಲಿದೆ.

ಅದೇ ನೀವು 25 ವರ್ಷದಿಂದಲೇ ಹೂಡಿಕೆ ಮಾಡುವ ಪ್ಲಾನ್​ನಲ್ಲಿದ್ದೆ ತಿಂಗಳಿಗೆ 3 ಸಾವಿರ ರೂಪಾಯಿಯನ್ನು ಕೂಡಿಟ್ಟರೂ ನಿವೃತ್ತಿಯ ವೇಳೆಗೆ 12.6 ಲಕ್ಷ ರೂಪಾಯಿ ಹೂಡಿಕೆ ಮಾಡಿ 1.95 ಕೋಟಿ ರೂಪಾಯಿ ಪಡೆಯಲಿದ್ದೀರಿ.

ಚಿಕ್ಕ ವಯಸ್ಸಿನಿಂದಲೇ ಹೂಡಿಕೆ ಮಾಡುವುದರಿಂದಾಗುವ ಲಾಭಗಳು

ಒಟ್ಟು ಹೂಡಿಕೆ ಮೊತ್ತ                         ಮಾಸಿಕ ಹೂಡಿಕೆ                       ಒಟ್ಟು ಹೂಡಿಕೆ                ಬಡ್ಡಿ       ಅವಧಿ              ಕಾರ್ಪಸ್​

ಹೂಡಿಕೆದಾರನ ವಯಸ್ಸು: 40              10,000                             24 ಲಕ್ಷ ರೂ.                    15%       20 ವರ್ಷ            1.52ಕೋಟಿ

ಹೂಡಿಕೆದಾರನ ವಯಸ್ಸು:25              3,000                                 12.6 ಲಕ್ಷ ರೂ.                 12%          35 ವರ್ಷ           1.95 ಕೋಟಿ

ನಿವೃತ್ತಿ ಕಾರ್ಪಸ್​ ಬಗ್ಗೆ ಪ್ಲಾನ್​ ಮಾಡುವ ವೇಳೆ ಹಣದುಬ್ಬರ, ಹೂಡಿಕೆ ಶುಲ್ಕ ಹಾಗೂ ತೆರಿಗೆ ಇವುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಏಕೆಂದರೆ ಈ ಅಂಶಗಳು ನಿಮ್ಮ ಆದಾಯವನ್ನು ತಗ್ಗಿಸಲಿದೆ. ಹೀಗಾಗಿ ಈ ಎಲ್ಲದರ ಬಗ್ಗೆ ಸರಿಯಾಗಿ ಅರಿತುಕೊಂಡು ಹೂಡಿಕೆ ಮಾಡಿ.

ವಯಸ್ಸಾದಂತೆ ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಲಿದೆ. ಈಗೆಲ್ಲ ಚಿಕಿತ್ಸೆಯ ಮೊತ್ತ ಕೂಡ ಕೈಗೆಟುಕುವ ದರದಲ್ಲಿ ಇಲ್ಲ. ಹೀಗಾಗಿ ಹೆಲ್ತ್​ ಇನ್ಶುರೆನ್ಸ್​ ಮಾಡುವ ಮುನ್ನ ಈ ಪಾಲಿಸಿಯು ಭವಿಷ್ಯದಲ್ಲಿ ನಿಮ್ಮ ಎಲ್ಲಾ ರೀತಿಯ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.

ಕೆಲವರು ನಿರಂತರವಾಗಿ ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡುತ್ತಲೇ ಇರ್ತಾರೆ. ಆದರೂ ನಿವೃತ್ತಿ ಬಳಿಕ ದೊಡ್ಡ ಮಟ್ಟದ ಕಾರ್ಪಸ್​ ಪಡೆಯುವಲ್ಲಿ ವಿಫಲರಾಗುತ್ತಾರೆ. ನೀವು ತಪ್ಪು ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ನಿವೃತ್ತಿ ಬಳಿಕ ನಿಮಗೆ ಎಷ್ಟು ಹಣದ ಅವಶ್ಯಕತೆ ಬೀಳಬಹುದು ಎಂಬ ಅಂದಾಜು ಇದೆಯೋ ಅದೇ ರೀತಿಯ ಯೋಜನೆಗಳಲ್ಲಿ ಹೂಡಿಕೆ ಮಾಡಿ.

ನಿವೃತ್ತಿ ಬಳಿಕವೂ ಆರ್ಥಿಕವಾಗಿ ಸ್ವತಂತ್ರರಾಗಬಯಸುವ ನೀವು ಹಣಕಾಸಿನ ವಿಚಾರದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲೇಬೇಕು. ನಿಮ್ಮ ಹೂಡಿಕೆ ಸಾಮರ್ಥ್ಯ ಹಾಗೂ ನಿವೃತ್ತಿ ಬಳಿಕ ಬೇಕಾಗುವ ಹಣಕ್ಕೆ ಸರಿಯಾಗಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ. ದಿನನಿತ್ಯದ ಖರ್ಚಿಗೆ ಬೇಕಾಗುವಷ್ಟು ಹಣವನ್ನು ಉಳಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಈ ಉಳಿತಾಯ ಯೋಜನೆಗಳ ಹಣವನ್ನು ಮೊದಲೇ ಬಳಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...