ಹಿಂದೂ ಸಂಪ್ರದಾಯದ ಪ್ರಕಾರ ನಡೆಯುವ ಮದುವೆ ಅಂದರೆ ಅಲ್ಲಿ ಶಾಸ್ತ್ರ, ಸಡಗರ ಹಾಗೂ ಪ್ರೀತಿಗೆ ಯಾವುದೇ ರೀತಿ ಕಡಿಮೆಯಿಲ್ಲ.
ಸಡಗರ ಹಾಗೂ ಫನ್ನಿ ಕ್ಷಣಗಳಿಲ್ಲದೇ ಭಾರತೀಯ ಮದುವೆಗಳು ಪೂರ್ಣ ಎಂದು ಹೇಳಲು ಸಾಧ್ಯವೇ ಇಲ್ಲ. ಹಿಂದೆಲ್ಲ ಮದುವೆ ದಿನದಂದು ಪತಿಯ ಮನೆಗೆ ಹೊರಡುವಾಗ ವಧು ಅಳುವ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಈಗೀಗ ಈ ದೃಶ್ಯಗಳು ಕಾಣಸಿಗೋದು ಕಡಿಮೆ ಎಂಬಂತಾಗಿದೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ವರ ತನ್ನ ವಧುವಿಗೆ ಗಂಡನ ಮನೆಗೆ ಹೊರಡುವ ಮುನ್ನ ಚಾಳಿಸುವ ದೃಶ್ಯ ವೈರಲ್ ಆಗಿದೆ. ಇದರಲ್ಲಿ ವರ ತನ್ನ ಮನೆಗೆ ವಧುವನ್ನು ಕರೆದುಕೊಂಡು ಹೋಗುವ ಮುನ್ನ ಈ ರೀತಿ ಕಾಲೆಳಿದಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ವರನ ಜೊತೆಯಲ್ಲಿ ಕಾರಿನಲ್ಲಿ ವಧು ಕೂಡ ಕುಳಿತಿರುವುದನ್ನು ಕಾಣಬಹುದಾಗಿದೆ. ಪತಿಯ ಈ ಚೇಷ್ಠೆ ಕಂಡು ವಧು ಬಿದ್ದು ಬಿದ್ದು ನಕ್ಕಿದ್ದಾರೆ.
https://www.instagram.com/p/CB-qb2HFrpA/?utm_source=ig_web_copy_link