ಮಗು ಏನು ತುಂಟತನ ಮಾಡಿದರೂ ಪೋಷಕರಿಗೆ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ಆಟಿಕೆಗೊಳೊಂದಿಗೆ ಆಡುವಾಗ ಹೆತ್ತವರು ಜಾಗರೂಕತೆ ವಹಿಸುತ್ತಾರೆ. ಭಾರಿ ಗಾತ್ರದ ವಸ್ತುವನ್ನು ಮುಟ್ಟಲೂ ಬಿಡುವುದಿಲ್ಲ. ಅಲ್ಲದೆ ಮಕ್ಕಳಿಗೆ ಅಂತಾ ವಸ್ತುವನ್ನು ಎತ್ತಲೂ ಸಾಧ್ಯವಾಗುವುದಿಲ್ಲ. ಆದರೆ, ಇಲ್ಲೊದು ಮಗು ಭಾರವಾದ ವಸ್ತುವನ್ನು ಎತ್ತುವ ಮೂಲಕ ಭಾರಿ ಸುದ್ದಿಯಾಗಿದೆ.
ಹೌದು, ಒಂದು ವರ್ಷದ ಗಂಡು ಮಗು, 6 ಕೆ.ಜಿ. ತೂಕದ ಚೆಂಡನ್ನು ಎತ್ತುವ ಮುಖಾಂತರ ಎಲ್ಲರನ್ನೂ ವಿಸ್ಮಯಗೊಳಿಸಿದ್ದಾನೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಮಗು ಭಾರವಾದ ಕಪ್ಪು ಚೆಂಡನ್ನು ಎತ್ತುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
BIG NEWS: ‘ರೇಪ್’ ಹೇಳಿಕೆ ಕೊಟ್ಟು ‘ತಮಾಷೆ’ಗಾಗಿ ಮಾತನಾಡಿದೆ ಎಂದ ಗೃಹ ಸಚಿವ
ಮಗುವಿನ ಸಾಮರ್ಥ್ಯ ವೀಕ್ಷಿಸಿದ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ. ಈ ಮಗು ದೊಡ್ಡವನಾದ ಬಳಿಕ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಪಡೆಯಬಹುದು ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.