alex Certify SHOCKING NEWS: ಒಂದು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ; ಬಾಗಲಕೋಟೆಯಲ್ಲಿ ಹೃದಯವಿದ್ರಾವಕ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಒಂದು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ; ಬಾಗಲಕೋಟೆಯಲ್ಲಿ ಹೃದಯವಿದ್ರಾವಕ ಘಟನೆ

ಬಾಗಲಕೋಟೆ: ಒಂದು ವರ್ಷದ ಪುಟ್ಟ ಕಂದಮ್ಮನೊಂದಿಗೆ ತಾಯಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ರಾಘಾಪುರದಲ್ಲಿ ನಡೆದಿದೆ.

ಫಕೀರವ್ವ (26) ಹಾಗೂ ಒಂದು ವರ್ಷದ ಮಗು ಶಿವಾನಿ ಮೃತರು. ಹೆರಿಗೆಗಾಗಿ ಮಹಿಳೆ ತನ್ನ ಅಜ್ಜಿಯ ಊರಾದ ರಾಘಾಪುರಕ್ಕೆ ಬಂದಿದ್ದಳು. ಇಂದು ಗಂಡನ ಮನೆಯವರು ಕರೆದುಕೊಂಡು ಹೋಗಲೆಂದು ರಾಘಾಪುರಕ್ಕೆ ಬಂದಿದ್ದಾರೆ. ಆದರೆ ಫಕೀರವ್ವ ತನ್ನ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಅಜ್ಜಿಯ ಜಮೀನಿನಲ್ಲಿರುವ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮಗುವಿನ ಮೃತದೇಹವನ್ನು ಬಾವಿಯಿಂದ ಹೊರತೆಗೆದಿದ್ದು, ಮಹಿಳೆಗಾಗಿ ಬಾವಿಯಲ್ಲಿ ಶೋಧಕಾರ್ಯ ಮುಂದುವರೆದಿದೆ. ಮಗುವಿನೊಂದಿಗೆ ಮಹಿಳೆಯ ಆತ್ಮಹತ್ಯೆ ಹಲವು ಅನುಮಾನಕ್ಕೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...