alex Certify Shocking News: ಆಟವಾಡುತ್ತ ನೀರಿನ ಸಂಪಿಗೆ ಬಿದ್ದ ಕಂದಮ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಆಟವಾಡುತ್ತ ನೀರಿನ ಸಂಪಿಗೆ ಬಿದ್ದ ಕಂದಮ್ಮ

ಮೈಸೂರು: ಅಕ್ಕನ ಜೊತೆ ಆಟವಾಡುತ್ತಿದ್ದ ಒಂದುವರೆ ವರ್ಷದ ಮಗು ನೀರಿನ ಸಂಪಿಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದೆ.

ತೆಂಕಲಕೊಪ್ಪಲು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನಿರ್ಮಾಣ ಹಂತದ ಮನೆ ಮುಂದೆ ಅಕ್ಕನ ಜೊತೆ ಮಗು ದಯಾನಂದ ಆಟವಾಡುತ್ತಿದ್ದ. ಅಕ್ಕ, ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ತಮ್ಮ ನೀರಿನ ಸಂಪಿಗೆ ಬಿದ್ದಿದ್ದಾನೆ.

ಮಗು ಕಾಣದೇ ಕಂಗಾಲಾದ ಪೋಷಕರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಬಳಿಕ ನೀರಿನ ಸಂಪಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಕಂದನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...