alex Certify BIG NEWS: ‘ರೇಪ್’ ಹೇಳಿಕೆ ಕೊಟ್ಟು ‘ತಮಾಷೆ’ಗಾಗಿ ಮಾತನಾಡಿದೆ ಎಂದ ಗೃಹ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ರೇಪ್’ ಹೇಳಿಕೆ ಕೊಟ್ಟು ‘ತಮಾಷೆ’ಗಾಗಿ ಮಾತನಾಡಿದೆ ಎಂದ ಗೃಹ ಸಚಿವ

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತೆ ಉಡಾಫೆ ಮಾತನಾಡಿದ್ದು, ತಮಾಷೆಯಾಗಿ ಮಾತನಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ.

ರೇಪ್ ನಡೆದಿದ್ದು ಅಲ್ಲಿ, ಆದರೆ ಕಾಂಗ್ರೆಸ್ ನವರು ನನ್ನ ಮೇಲೆ, ಗೃಹ ಸಚಿವರ ಮೇಲೆ ರೇಪ್ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿರುವ ಗೃಹ ಸಚಿವರು, ನಾನು ಯಾರನ್ನೂ ನೋಯಿಸಬೇಕೆಂಬ ಉದ್ದೇಶದಿಂದ ಹಾಗೆ ಹೇಳಿಲ್ಲ, ತಮಾಷೆಯಾಗಿ ಮತನಾಡಿದ್ದೇನೆ ಅಷ್ಟೇ. ಕಾಂಗ್ರೆಸ್ ನಾಯಕರು ನನ್ನ ಹೇಳಿಕೆಯನ್ನು ದೊಡ್ಡದು ಮಾಡಿದರೆ ಹೇಗೆ? ಎಂದಿದ್ದಾರೆ.

ವಿದ್ಯಾರ್ಥಿನಿ ಮೇಲಿನ ಅಮಾನುಷ ಕೃತ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಖಂಡನೆ ವ್ಯಕ್ತವಾಗುತ್ತಿದ್ದರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಗೃಹ ಸಚಿವರು, ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದರೆ ಸಂವೇದನಾರಹಿತರಾಗಿ ಉತ್ತರ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...