ಭಾರತೀಯ ಈಜುಪಟು ಸಾಜನ್ ಪ್ರಕಾಶ್ಗೆ ಸ್ವಲ್ಪದರಲ್ಲೇ ಒಲಿಂಪಿಕ್ ಪದಕ ಕೈ ತಪ್ಪಿದೆ. ಪುರುಷರ ವಿಭಾಗದ 200 ಮೀಟರ್ ಬಟರ್ಫ್ಲೈ ಸೆಮಿಫಿನಾಲೆ ಅರ್ಹತಾ ಸಾಜನ್ 4ನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯ್ತು.
ಈ ಮೂಲಕ ಸೆಮಿಫಿನಾಲೆಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಭಾರತದ ಈಜುಪಟು ಸಾಜನ್ ಪ್ರಕಾಶ್ರನ್ನ ಹಿಂದಿಕ್ಕಿ ನಾರ್ವೆಯ ಟೊಮೊ ಹ್ವಾಸ್, ಸಿಂಗಾಪುರದ ಕ್ವಾಹ್ ಝೆಂಗ್ ವೆನ್, ಐರ್ಲೆಂಡ್ನ ಬ್ರೆಂಡನ್ ಹೈಲ್ಯಾಂಡ್ ಎಂಬವರು ಬಟರ್ಫ್ಲೈ ಸುತ್ತಿನಲ್ಲಿ ಮೊದಲ ಮೂರು ಸ್ಥಾನವನ್ನ ಪಡೆದು ಸೆಮಿಫಿನಾಲೆಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಸಾಜನ್ಗೆ ಒಲಿಂಪಿಕ್ ಪದಕ ಸ್ವಲ್ಪದರಲ್ಲೇ ಕೈ ತಪ್ಪಿದೆ.