ಆಸ್ಸಾಂನ ಕಮರೂಪ್ ಜಿಲ್ಲೆಯ ಗ್ರಾಮವೊಂದರಲ್ಲಿ ತೆರೆದ ಬಾವಿಯಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿದೆ. ಈ ಮೂಲಕ ಚಿರತೆಯ ರಕ್ಷಣಾ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ನಡುವೆ ಈ ಚಿರತೆಯ ಫೋಟೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಚಿರತೆಯ ಖದರ್ ಲುಕ್ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಪರವಾನಿಗಿ ಇಲ್ಲದ ಪೆಟ್ ಶಾಪ್ ಗಳಿಗೆ ಬೀಗ : ಸಚಿವ ಪ್ರಭು ಚವ್ಹಾಣ್
ಭಯಾನಕವಾಗಿರುವ ಈ ಫೋಟೋದಲ್ಲಿ ಚಿರತೆಯ ಕಣ್ಣನ್ನ ನೋಡ್ತಿದ್ರೆ ಅದು ಭಯಗೊಂಡಿದೆ ಅನ್ನೋದು ಸ್ಪಷ್ಟವಾಗ್ತಿದೆ. ಟ್ವಿಟರ್ನ ಸಾಕಷ್ಟು ಬಳಕೆದಾರರು ಅದರಲ್ಲೂ ವಿಶೇಷವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಫೋಟೋವನ್ನ ವ್ಯಾಪಕವಾಗಿ ಶೇರ್ ಮಾಡ್ತಿದ್ದಾರೆ.
ಏಕಾಏಕಿ ಮನೆಗೆ ನುಗ್ಗಿದ ಟ್ರಕ್: ಭೀಕರ ಅಪಘಾತದಲ್ಲಿ ಐವರು ಮಕ್ಕಳ ಸಾವು
ಈ ಫೋಟೋವನ್ನ ಶೇರ್ ಮಾಡಿರುವವರಲ್ಲಿ ಒಬ್ಬರಾದ ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್, ಆಸ್ಸಾಂನಲ್ಲಿ ಬಾವಿಯೊಂದರಲ್ಲಿ ಚಿರತೆಯೊಂದು ಬಿದ್ದಿತ್ತು. ಅರಣ್ಯ ಇಲಾಖೆ ಈ ಚಿರತೆಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿರತೆಯು ಏನನ್ನೋ ಹೇಳಲು ಯತ್ನಿಸುತ್ತಿದೆಯಾ..? ಎಂದು ಶೀರ್ಷಿಕೆ ನೀಡಿದ್ದಾರೆ.