alex Certify ಏಕಾಏಕಿ ಮನೆಗೆ ನುಗ್ಗಿದ ಟ್ರಕ್​: ಭೀಕರ ಅಪಘಾತದಲ್ಲಿ ಐವರು ಮಕ್ಕಳ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಏಕಿ ಮನೆಗೆ ನುಗ್ಗಿದ ಟ್ರಕ್​: ಭೀಕರ ಅಪಘಾತದಲ್ಲಿ ಐವರು ಮಕ್ಕಳ ಸಾವು

ನಿಯಂತ್ರಣ ತಪ್ಪಿದ ಟ್ರಕ್​ ಮನೆಗೆ ನುಗ್ಗಿದ ಪರಿಣಾಮ ಐವರು ಮಕ್ಕಳು ಹಾಗೂ ಚಾಲಕ ಸಾವಿಗೀಡಾದ ದಾರುಣ ಘಟನೆ ಬಿಹಾರದ ಮುಜಾಫರ್​ನಗರದಲ್ಲಿ ನಡೆದಿದೆ.

ಅಲ್ಲದೇ ಈ ದುರಂತದಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನ ಶ್ರೀಕೃಷ್ಣ ಮೆಡಿಕಲ್​ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗುರುವಾರ ರಾತ್ರಿ 8.30 ಸುಮಾರಿಗೆ ಸರೈಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಸಹದನಿ ಎಂಬ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ರು.

ಪೊಲೀಸರು ಕಲೆ ಹಾಕಿರುವ ಮಾಹಿತಿಯ ಪ್ರಕಾರ ಅಪಘಾತದಲ್ಲಿ ಧ್ವಂಸಗೊಂಡ ಈ ಮನೆಯು ಲಚ್ಚು ಪಾಸ್ವಾನ್​ ಎಂಬವರಿಗೆ ಸೇರಿದ್ದಾಗಿದೆ. ಲಚ್ಚು ಅವರ ಸ್ವಂತ ಮಕ್ಕಳು ಹಾಗೂ ಇತರೆ ಕುಟುಂಬದ ಮಕ್ಕಳು ಆಟವಾಡುತ್ತಿದ್ದ ವೇಳೆ ಟ್ರಕ್​ ಬಂದು ಗುದ್ದಿದೆ.

ನಾಲ್ವರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿದ್ದರೆ ಇನ್ನೊಂದು ಮಗು ಆಸ್ಪತ್ರೆ ಸೇರಿಸುವ ಮಾರ್ಗ ಮಧ್ಯದಲ್ಲಿ ಜೀವ ಬಿಟ್ಟಿದೆ. ಚಾಲಕ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...