ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಒಂದು ಸಮುದ್ರಕ್ಕೆ ಉರುಳಿ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಸಮುದ್ರ ಪಾಲಾಗಿರುವ ಘಟನೆ ನವಮಂಗಳೂರು ಬಂದರಿನ 14ನೇ ಬರ್ತ್ ನಲ್ಲಿ ನಡೆದಿದೆ.
ಬಾಣಂತಿ ಜೀವ ಕಾಪಾಡಲು ನೆರವಾದ ಅತಿ ವಿರಳ ʼಬಾಂಬೆ ಬ್ಲಡ್ʼ ಗ್ರೂಪ್ ದಾನಿಗಳು
ಕಲ್ಲಿದ್ದಲನ್ನು ಹಡಗಿಗೆ ಲೋಡ್ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಉರುಳಿದೆ. ಚಾಲಕ ರಾಜೇಸಾಬ (25) ಹಾಗೂ ಕ್ಲೀನರ್ ಭೀಮಪ್ಪ ಇಬ್ಬರೂ ಸಮುದ್ರ ಪಾಲಾಗಿದ್ದಾರೆ.
ಅನುಮತಿಯಿಲ್ಲದೆ ಮೊಬೈಲ್ ಸಂಖ್ಯೆ ಹಿಂಪಡೆದ ಕಂಪನಿ: ಕೋರ್ಟ್ ಮೆಟ್ಟಿಲೇರಿ ಜಯ ಸಾಧಿಸಿದ ಬೆಂಗಳೂರು ವ್ಯಕ್ತಿ
ಚಾಲಕ ರಾಜೇಸಾಬ ಮೃತದೇಹ ಪತ್ತೆಯಾಗಿದ್ದು, ಭೀಮಪ್ಪನಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರೆದಿದೆ.