alex Certify ಅನುಮತಿಯಿಲ್ಲದೆ ಮೊಬೈಲ್ ಸಂಖ್ಯೆ ಹಿಂಪಡೆದ​ ಕಂಪನಿ: ಕೋರ್ಟ್‌ ಮೆಟ್ಟಿಲೇರಿ ಜಯ ಸಾಧಿಸಿದ ಬೆಂಗಳೂರು ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುಮತಿಯಿಲ್ಲದೆ ಮೊಬೈಲ್ ಸಂಖ್ಯೆ ಹಿಂಪಡೆದ​ ಕಂಪನಿ: ಕೋರ್ಟ್‌ ಮೆಟ್ಟಿಲೇರಿ ಜಯ ಸಾಧಿಸಿದ ಬೆಂಗಳೂರು ವ್ಯಕ್ತಿ

2012ರಿಂದ ತಾವು ಹೊಂದಿದ್ದ ಫ್ಯಾನ್ಸಿ ಮೊಬೈಲ್​ ಸಂಖ್ಯೆಯನ್ನ ತಮ್ಮ ಅನುಮತಿಯಿಲ್ಲದೇ ಹೊರ ರಾಜ್ಯದ ಗ್ರಾಹಕರಿಗೆ ನೀಡಿದ ಸೆಲ್​ಫೋನ್​​ ಸರ್ವೀಸ್​ ಪ್ರೊವೈಡರ್​ ವಿರುದ್ಧ ಬೆಂಗಳೂರಿನ ವ್ಯಕ್ತಿಯೊಬ್ಬರು ಮೂರು ವರ್ಷದಿಂದ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ದೊರಕಿದೆ.

ಮೂರು ವರ್ಷಗಳ ಕಾಲ ವಾದ – ವಿವಾದವನ್ನ ಆಲಿಸಿದ ನಗರ ಗ್ರಾಹಕ ನ್ಯಾಯಾಲಯವು ಗ್ರಾಹಕನಿಗೆ ಕಂಪನಿಯೂ 52 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.

ಬಿಟಿಎಂ ಲೇ ಔಟ್​ ಫಸ್ಟ್​ ಸ್ಟೇಜ್​​ ನಿವಾಸಿಯಾದ 33 ವರ್ಷದ ಪವನ್​ ಸಿಂಗ್​ ಎಂಬವರು ತಮ್ಮ ಮೂರು ಸೆಲ್​ಫೋನ್​ ನಂಬರ್​ಗಳೂ 76767ನಿಂದ ಆರಂಭವಾಗುವ ಹಾಗೆ ಮಾಡಿಕೊಂಡಿದ್ದರು. ಉದ್ಯಮಕ್ಕೆ ಅನುಕೂಲವಾಗಿ ಎಂಬ ದೃಷ್ಟಿಯಿಂದ ಪವನ್​ ಈ ರೀತಿ ಮೂರು ಫ್ಯಾನ್ಸಿ ನಂಬರ್​ಗಳನ್ನ ಹೊಂದಿದ್ರು.

ಆದರೆ 2017ರ ನವೆಂಬರ್​ 8ನೇ ತಾರೀಖಿನಂದು ವೋಡಾಫೋನ್​ ಕಂಪನಿಗೆ ಕರೆ ಮಾಡಿದ್ದ ಪವನ್​ ತಮ್ಮ ಮೂರು ರಿಲಾಯನ್ಸ್​​ ಸಿಮ್​ಗಳನ್ನ ಪೋರ್ಟ್​ ಮಾಡುವಂತೆ ಮನವಿ ಮಾಡಿದ್ರು.

ಆದರೆ ಇದಾದ ಬಳಿಕ ತನ್ನ 2 ಮೊಬೈಲ್​ ಸಂಖ್ಯೆಯನ್ನ ಆಂಧ್ರ ಪ್ರದೇಶ ಹಾಗೂ ಇನ್ನೊಂದು ಸಂಖ್ಯೆಯನ್ನ ಹರಿಯಾಣದಲ್ಲಿರುವ ಬೇರೆಯ ಗ್ರಾಹಕರಿಗೆ ನೀಡಿರುವ ವಿಚಾರ ಪವನ್​ ಗಮನಕ್ಕೆ ಬಂದಿದೆ. ಇದಾದ ಬಳಿಕ ಹೊಸ ಸರ್ವೀಸ್​ ಪ್ರೊವೈಡರ್​ಗೆ ಕರೆ ಮಾಡಿದ ಪವನ್ ಈ ಸಮಸ್ಯೆ ಸರಿಪಡಿಸಿಕೊಡಿ ಎಂದು ಕೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...