alex Certify ಬಾಣಂತಿ ಜೀವ ಕಾಪಾಡಲು‌ ನೆರವಾದ ಅತಿ ವಿರಳ ʼಬಾಂಬೆ ಬ್ಲಡ್ʼ ಗ್ರೂಪ್​ ದಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಣಂತಿ ಜೀವ ಕಾಪಾಡಲು‌ ನೆರವಾದ ಅತಿ ವಿರಳ ʼಬಾಂಬೆ ಬ್ಲಡ್ʼ ಗ್ರೂಪ್​ ದಾನಿಗಳು

ಕೊರೊನಾ ಎರಡನೆ ಅಲೆ ವಿರುದ್ಧ ಸಂಪೂರ್ಣ ದೇಶ ಹೋರಾಡುತ್ತಿದೆ. ಜನರನ್ನ ಉಳಿಸಲು ಸರ್ಕಾರ ಪ್ರಯತ್ನ ಪಡುತ್ತಿರೋ ನಡುವೆಯೇ ಅನೇಕ ಸಹೃದಯಿಗಳು ಈ ಹೋರಾಟದ ಜೊತೆ ಕೈ ಜೋಡಿಸಿದ್ದಾರೆ. ಕಷ್ಟದಲ್ಲಿರುವವವರಿಗೆ ಸಹಾಯ ಮಾಡಿದ ಸಾಕಷ್ಟು ವಿಡಿಯೋಗಳು, ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ.

ಒಡಿಶಾದ ಗೋಲಮುಂಡಾ ಬ್ಲಾಕ್​​ನ ಮಕ್ಲಾ ಗ್ರಾಮದ ರಾಧಿಕಾ ಜುವಾಡ್​ ಎಂಬವರು ಭವಿನ್​ ಪಟ್ನಾದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಜೆರಿಯನ್​ ಹೆರಿಗೆಗೆ ಒಳಗಾಗಿದ್ದ ವೇಳೆ ಇದೇ ರೀತಿ ಸಹಾಯವನ್ನ ಪಡೆದಿದ್ದಾರೆ.

ಹೆರಿಗೆ ಬಳಿಕ ರಾಧಿಕಾ ಮಗುವನ್ನ ಕಳೆದುಕೊಂಡು ಮಾತ್ರವಲ್ಲದೇ ಒ ಪಾಸಿಟಿವ್​​​ ರಕ್ತದ ಅವಶ್ಯಕತೆಯಿಂದ ಪರಿತಪಿಸಿದ್ದರು. ಇದೊಂದು ಬಾಂಬೆ ಫಿನೋಟೈಪ್​​ ಗುಂಪಿಗೆ ಸೇರಿದ್ದು ಅತ್ಯಂತ ವಿರಳವಾದ ರಕ್ತದ ಮಾದರಿಯಾಗಿತ್ತು.

ಕಾಲಹಂಡಿಯಲ್ಲೆಲ್ಲೂ ಈ ರಕ್ತ ಸಿಗದೇ ಇದ್ದ ಕಾರಣ ಕುಟುಂಬಸ್ಥರು ಜಿಲ್ಲೆಯಾದ್ಯಂತ ದಾನಿಗಳಿಗಾಗಿ ಹುಡುಕಾಟ ನಡೆಸಿದ್ದರೂ ಸಹ ರಕ್ತವನ್ನ ಸಂಗ್ರಹಿಸುವಲ್ಲಿ ವಿಫಲರಾಗಿದ್ದರು.

ಭುವನೇಶ್ವರದ ಕಲಿಂಗಾ ಫೌಂಡೇಶನ್​​ನ ಸಹಾಯದಿಂದ ಸೋಶಿಯಲ್​ ಮೀಡಿಯಾದ ಕಾರ್ಯಕರ್ತರು ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ. ಈ ಫೌಂಡೇಶನ್​ ಇಬ್ಬರು ದಾನಿಗಳನ್ನ ಹುಡುಕುವಲ್ಲಿ ಯಶಸ್ವಿಯಾಗಿತ್ತು. ರಕ್ತದಾನಿಗಳಾದ ದುರ್ಲವಾ ಕುಮಾರ್​ ಸಾಹು ಹಾಗೂ ಮಾನಸ್​ ರಂಜನ್​ ಪ್ರಧಾನ್​ ಎಂಬವರು ಕೂಡಲೇ ಆಸ್ಪತ್ರೆ ಬಳಿಗೆ ಧಾವಿಸಿದ್ದರು. ಈ ರೀತಿ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದ್ದಕ್ಕಾಗಿ ನಮಗೆ ಹೆಮ್ಮೆ ಇದೆ ಎಂದು ದುರ್ಲವ ಹಾಗೂ ಮಾನಸ್​ ಹೇಳಿದ್ದಾರೆ. ಇವರಿಬ್ಬರೂ ರಾಧಿಕಾಗಾಗಿ ರಕ್ತದಾನ ಮಾಡುವ ಮೂಲಕ ಆಕೆಯ ಜೀವವನ್ನ ಕಾಪಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...