ಹೊಂಬಣ್ಣದ ಜೀರುಂಡೆಯೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ಕಾರಿಡೋಟೆಲ್ಲಾ ಸಕ್‌ಪಂಕ್ಟಾಟ ಹೆಸರಿನ ಈ ಜೀರುಂಡೆಯು ಕ್ರೈಸೋಮಿಲಿಡೇ ಕುಟುಂಬಕ್ಕೆ ಸೇರಿದ್ದು ಎನ್ನಲಾಗಿದೆ.
ವ್ಯಕ್ತಿಯೊಬ್ಬರ ಹಸ್ತದ ಮೇಲೆ ಹೊಂಬಣ್ಣದ ಜೀರುಂಡೆಗಳು ಓಡಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ವಿದ್ಯುತ್ ವೈರ್ ನೆರವಿಂದ ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಕಪಿಸೈನ್ಯ
“ಹೊಳೆವುದೆಲ್ಲಾ ಚಿನ್ನ ಎಂದು ಕೆಲವೊಮ್ಮೆ ಅನಿಸುತ್ತದೆ. ಹೊಂಬಣ್ಣದ ಜೀರುಂಡೆಗಳು ಆಗ್ನೇಯ ಏಷ್ಯಾದಲ್ಲಿ ಕಾಣುತ್ತವೆ” ಎಂದು ನಂದಾ ತಮ್ಮ ಪೋಸ್ಟ್‌ನಲ್ಲಿ ಪರಿಚಯಿಸಿದ್ದಾರೆ.