ಮೊಮ್ಮಗನಿಗೆ ಒಂದೊಳ್ಳೆ ಊಟವನ್ನ ಕೊಡಿಸಬೇಕು ಅಂತಾ ಪ್ಲಾನ್ ಮಾಡಿದ ತಾತ ಮೆಕ್ಡೊನಾಲ್ಡ್ಗೆ ಭಾರೀ ಮೊತ್ತದ ಹಣ ಖರ್ಚು ಮಾಡಿದ್ದಾನೆ.
ಜಾನ್ ಬಾಬೇಜ್ ತಮ್ಮ ಮೊಮ್ಮಗ ಟೈಲರ್ಗಾಗಿ 200 ರೂಪಾಯಿ ಆಹಾರವನ್ನ ಮೆಕ್ಡೊನಾಲ್ಡ್ನಲ್ಲಿ ಖರೀದಿಸಿದ್ದರು. ಆದರೆ ಈ ತಾತನಿಗೆ ಪಾರ್ಕಿಂಗ್ ದಂಡ ಸೇರಿದಂತೆ 2 ಲಕ್ಷ ರೂಪಾಯಿ ದಂಡ ತೆತ್ತಬೇಕಾದ ಪರಿಸ್ಥಿತಿ ಎದುರಾಗಿದೆ.
75 ವರ್ಷದ ವೃದ್ಧ ಪಾರ್ಕಿಂಗ್ ನಿಲ್ದಾಣದಲ್ಲಿ ಕೇವಲ 17 ನಿಮಿಷ ಹೆಚ್ಚುವರಿ ಸಮಯ ಕಳೆದಿದ್ದಾರೆ. 2 ಗಂಟೆಗಳ ಕಾಲ ಇಲ್ಲಿ ಪಾರ್ಕಿಂಗ್ಗೆ ಯಾವುದೇ ಶುಲ್ಕವಿರಲಿಲ್ಲ. ಆದರೆ ಕಾರಿನಲ್ಲೇ ನಿದ್ದೆ ಹೋಗಿದ್ದ ವೃದ್ಧ 17 ನಿಮಿಷ ಹೆಚ್ಚುವರಿಯಾಗಿ ಉಳಿದು ಬಿಟ್ಟಿದ್ದಾರೆ. ಈ ಸಮಯದಲ್ಲಿ ವೃದ್ಧನ ಮೊಮ್ಮಗ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ತಾತ – ಮೊಮ್ಮಗರಿಬ್ಬರಿಗೂ ಪಾರ್ಕಿಂಗ್ ಶುಲ್ಕದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಅಸ್ತಿತ್ವದಲ್ಲಿದ್ದ ವಿಳಾಸಕ್ಕೆ ನೋಟಿಸ್ ಕಳುಹಿಸಿದ್ದರಿಂದ ಈಗಾಗಲೇ ದಂಡವನ್ನ ಪಾವತಿ ಮಾಡಿದ್ದಾರೆ. ಡಿಸಿಬಿಎಲ್ ಅಧಿಕಾರಿಗಳು ಮನೆಗೆ ಬಂದು 145327.77 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.