ಬಾಲ್ಯದಲ್ಲಿ ಡಬ್ಲು ಡಬ್ಲುಇ ನೋಡಿದವರು ನೀವಾಗಿದ್ರೆ ಅಂಡರ್ಟೇಕರ್ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಡಬ್ಲುಡಬ್ಲುಇ ವೇದಿಕೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನ ಹೊಂದಿರುವ ಆಂಡ್ರ್ಯೂ ಡಬ್ಲುಡಬ್ಲುಇಗೆ ಕಾಲಿಟ್ಟ 30ನೇ ವರ್ಷಕ್ಕೆ ಫೀಲ್ಡಿಗೆ ಗುಡ್ ಬೈ ಹೇಳಿದ್ದಾರೆ.
ರಿಂಗ್ಗೆ ವಿದಾಯ ಹೇಳುವ ಕೆಲವೇ ದಿನಗಳ ಮೊದಲು ಅಂಡರ್ಟೇಕರ್ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ್ರು. ಈ ಸಂದರ್ಶನದಲ್ಲಿ ಮೂವತ್ತು ವರ್ಷಗಳ ಡಬ್ಲುಡಬ್ಲುಇ ಜೀವನದಲ್ಲಿ ಅವರ ನೆಚ್ಚಿನ ಪಂದ್ಯ ಯಾವುದಾಗಿತ್ತು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ನಾನು, ರಾಂಡಿ ಸಾವೇಜ್ ಹಾಗೂ ರಿಕಿ ಸ್ಟೀಮ್ ಬೋಟ್ ಎಂದು ಟೇಕರ್ ಹೇಳಿದ್ರು. ಮಾತ್ರವಲ್ಲದೇ ರಿಕ್ಫ್ಲೇರ್ ಹಾಗೂ ಹಾರ್ಲೆಸನ್ ನಡುವಿನ ಯಾವುದೇ ಪಂದ್ಯ ನನಗೆ ಇಷ್ಟ ಎಂದಿದ್ದಾರೆ.
ಡಬ್ಲುಡಬ್ಲುಇನಿಂದ ಟೇಕರ್ಗೆ ವಿದಾಯ ಹೇಳುವ ದಿನ ಅವರ 30 ವರ್ಷಗಳ ಪ್ರಯಾಣದ ವಿಡಿಯೋವನ್ನ ಪ್ಲೇ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಟ್ರಿಪಲ್ ಹೆಚ್, ಸ್ಟೀವ್ ಆಸ್ಟಿನ್, ಜಾನ್ ಸೇನಾ ಸೇರಿದಂತೆ ಇತರರು ಟೇಕರ್ ಜೊತೆಗಿನ ಅನುಭವಗಳನ್ನ ಹಂಚಿಕೊಂಡ್ರು.