ಪ್ರೀತಿ, ಕರುಣೆ, ಮಾನವೀಯತೆಯನ್ನ ಹೊಂದಿರುವ ಮನುಷ್ಯ ಎಲ್ಲರಿಗೂ ಇಷ್ಟವಾಗ್ತಾನೆ. ಇದೀಗ ಟ್ವಿಟರ್ನಲ್ಲೂ ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡ್ತಾ ಇದ್ದು ನೆಟ್ಟಿಗರ ಮನ ಗೆದ್ದಿದೆ.
ಗ್ರೇ ಎಂಬ ಹೆಸರಿನ ಪುಟ್ಟ ಹುಡುಗ ಒಂದು ಚಿಕ್ಕ ವಸ್ತುವನ್ನ ತನ್ನ ತಾಯಿಯಿಂದ ತೆಗೆದುಕೊಳ್ಳುವ ಸಂದರ್ಭದಲ್ಲೂ ಅಮ್ಮನಿಗೆ ಮುದ್ದುಮುದ್ದಾಗಿ ಧನ್ಯವಾದ ತಿಳಿಸುವ ವಿಡಿಯೋ ಸಖತ್ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಅನೇಕರು ಪ್ರತಿಯೊಬ್ಬ ಮಕ್ಕಳು ಇಂತಹ ಸೌಜನ್ಯ ಗುಣವನ್ನ ಬೆಳೆಸಿಕೊಳ್ಳಬೇಕು ಅಂತಾ ಕಾಮೆಂಟ್ ಮಾಡ್ತಿದ್ದಾರೆ. ಅಲ್ಲದೇ ಮಗುವಿಗೆ ಇಷ್ಟೊಳ್ಳೆ ಗುಣವನ್ನ ಕಲಿಸಿಕೊಟ್ಟ ತಾಯಿಗೂ ಟ್ವೀಟಿಗರು ಧನ್ಯವಾದ ತಿಳಿಸಿದ್ದಾರೆ.