alex Certify ಸ್ಯಾಂಡಲ್​ವುಡ್​ನ ನಟಿ ಆತ್ಮಹತ್ಯೆಗೆ ಶರಣು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಡಲ್​ವುಡ್​ನ ನಟಿ ಆತ್ಮಹತ್ಯೆಗೆ ಶರಣು…..!

ಸ್ಯಾಂಡಲ್​ವುಡ್​ ನಟಿ ಸೌಜನ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿ ತೆರೆ ಎರಡರಲ್ಲೂ ಕಾಣಿಸಿಕೊಂಡಿದ್ದ ನಟಿ ಸೌಜನ್ಯ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಂಬಳಹೋಡಿನ ದೊಡ್ಡಬೆಲೆಯ ಸನ್​ ವರ್ತ್ ಅಪಾರ್ಟ್​ಮೆಂಟ್​ನಲ್ಲಿ ನಟಿ ನೇಣಿಗೆ ಕೊರಳೊಡ್ಡಿದ್ದಾರೆ.

ಸೌಜನ್ಯ ಸಾವಿಗು ಮೂರು ದಿನಗಳ ಮುಂಚೆಯೇ ಡೆತ್​ ನೋಟ್​ ಬರೆದಿದ್ದಾರೆ. ಇದರಲ್ಲಿ ನಟಿ ತಮ್ಮ ಪೋಷಕರು ಹಾಗೂ ಅಣ್ಣನ ಬಳಿ ಕ್ಷಮೆ ಕೇಳಿದ್ದಾರೆ. ತಮ್ಮ ಕಷ್ಟವಾಗ್ತಿದೆ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ. ಅಲ್ಲದೇ ಅಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಂದೆಗೆ ಹೇಳಿದ್ದಾರೆ.ಹಾಗೂ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದುಕೊಂಡಿದ್ದಾರೆ.

ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರ ಮೂಲದವರಾಗಿದ್ದಾರೆ. ಅನೇಕ ಧಾರವಾಹಿಗಳು ನಟಿಸಿದ್ದ ಇವರು ಚೌಕಟ್ಟು ಹಾಗೂ ಫನ್​ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟಿದ್ದರು. ಸೌಜನ್ಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...