ಯಾರಾದರೂ ಗಣ್ಯ ವ್ಯಕ್ತಿಗಳು ನಿಧನರಾದ್ರೆ ಅವರ ಕುಟುಂಬದವರೋ, ಸ್ನೇಹಿತರೋ ಅಥವಾ ಅಭಿಮಾನಿಗಳು ಪತ್ರಿಕೆಗಳಲ್ಲಿ ಶೃದ್ಧಾಂಜಲಿ ಅಂತಾ ಹಾಕೋದನ್ನ ನೋಡಿರ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಶೃದ್ದಾಂಜಲಿ ವಿವರಣೆ ಮಾತ್ರ ಕೊಂಚ ಡಿಫರೆಂಟ್ ಆಗಿದೆ.
ಲಾರಿ ಚಾಲಕರಾಗಿದ್ದ ಉಮಾ ಮಹೇಶ್ ಎಂಬವರು ಅಕ್ಟೋವರ್ 16ರಂದು ತಮ್ಮ 72ನೇ ವಯಸ್ಸಿಗೆ ವಿಧಿವಶರಾದ್ರು. ಆದರೆ ತಾವು ಸಾಯೋಕೂ ಮೊದಲೇ ತಮ್ಮ ವಿದಾಯದ ನೋಟ್ಸ್ ಬರೆದಿದ್ದ ಉಮಾಮಹೇಶ್ ಅದನ್ನ ತಾನು ಸತ್ತ ಮೇಲೆ ಪತ್ರಿಕೆಯಲ್ಲಿ ಹಾಕಿಸಬೇಕು ಅಂತಾ ಕುಟುಂಬಸ್ಥರಿಗೆ ಹೇಳಿದ್ದರು.
ಹೀಗಾಗಿ ಉಮಾ ಮಹೇಶ್ ನಿಧನದ ಬಳಿಕ ಕುಟುಂಬಸ್ಥರು ಸ್ಥಳೀಯ ಪತ್ರಿಕೆಯೊಂದರಲ್ಲಿ ಅವರ ನಿಧನ ವಾರ್ತೆಯನ್ನ ಹಾಕಿಸಿದ್ದಾರೆ. ಸ್ವಯಂ ಲಿಖಿತ ನಿಧನ ಪ್ರಕಟಣೆ ಎಂಬ ಶೀರ್ಷಿಕೆ ಹೊಂದಿರೋ ಈ ಡೆತ್ ನೋಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಆತ್ಮೀಯ ಸ್ನೇಹಿತರು, ಶತ್ರುಗಳು ಹಾಗೂ ಇವೆರಡರ ಮಧ್ಯೆ ಇರುವವರು ಎಂಬ ಸಾಲಿನೊಂದಿಗೆ ಈ ನಿಧನ ಪ್ರಕಟಣೆ ಆರಂಭವಾಗುತ್ತದೆ. ನನ್ನ ರೋಮಾಂಚನಕಾರಿ ಜೀವನದಲ್ಲಿ ಪಾಲುದಾರರಾದ ನಿಮಗೆಲ್ಲ ಧನ್ಯವಾದ. ನನ್ನ ಸಮಯ ಮುಗಿದಿದೆ. ನಿಮಗೀಗ ನಾನಿದ್ದೇನೆ ಎಂಬ ಹ್ಯಾಂಗೋವರ್ ಕೂಡ ಇಲ್ಲವೆಂದು ಭಾವಿಸಿರುವೆ, ಸಮಯ ಓಡುತ್ತಿದೆ. ಹೀಗಾಗಿ ನಿಮ್ಮ ಜೀವನವನ್ನ ಆನಂದಿಸಿ, ಶ್ವಾಶತವಾದ ಗುಡ್ ಬೈ ಅಂತಾ ಬರೆಯಲಾಗಿದೆ. ಈ ನಿಧನ ವಾರ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಇಷ್ಟು ಮಾತ್ರವಲ್ಲದೇ ಉಮಾಮಹೇಶ್ ಬಳಕೆ ಮಾಡಬಹುದಾದ ತಮ್ಮ ದೇಹದ ಅಂಗಾಗಳನ್ನ ಕಸಿಗಾಗಿ ಹಾಗೂ ಉಳಿದ ಭಾಗಗಳನ್ನ ಸಂಶೋಧನಾ ಉದ್ದೇಶಕ್ಕಾಗಿ ದಾನ ಮಾಡಿದ್ದಾರೆ.
https://www.facebook.com/ejji.k.umamahesh/posts/10222819812420237