alex Certify ಹಪ್ಪಳ ಹಿಡಿದು ʼಪಾಪಡಮ್ʼ‌ ಎಂದ ವಿದೇಶಿಗರ ಹಾಡು ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಪ್ಪಳ ಹಿಡಿದು ʼಪಾಪಡಮ್ʼ‌ ಎಂದ ವಿದೇಶಿಗರ ಹಾಡು ವೈರಲ್

ಕಾಮಿಡಿ ಅನ್ನೋ ವಿಚಾರಕ್ಕೆ ಬಂದರೆ ಸೋಶಿಯಲ್ ಮೀಡಿಯಾ ಎಂದಿಗೂ ನಮ್ಮನ್ನ ನಿರಾಸೆಗೊಳಿಸಿಲ್ಲ. ಕೆಲವು ವಿಡಿಯೋಗಳು ಸಮಾಜಕ್ಕೊಂದು ಸಂದೇಶ ನೀಡಿದ್ರೆ ಇನ್ನೂ ಕೆಲ ವಿಡಿಯೋಗಳು ನಮ್ಮನ್ನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇಂತಹದ್ದೇ ಒಂದು ಭಯಾನಕ ವಿಡಿಯೋ ಇದೀಗ ಟ್ವಿಟರ್​ನಲ್ಲಿ ವೈರಲ್​ ಆಗಿದೆ.

ಹಪ್ಪಳವನ್ನ ಕೈಲಿ ಹಿಡಿದ ವಿದೇಶಿಗರು ಪಾಪಡಮ್​ ಎಂಬ ಹಾಡಿಗೆ ನೃತ್ಯ ಮಾಡಿದ್ದಾರೆ. 1.24 ನಿಮಿಷ ಇರೋ ಈ ವಿಡಿಯೋದಲ್ಲಿ ಹಾಡು ಕೊನೆಯಾಗುವವರೆಗೂ ಪಾಪಡಮ್​ ಅನ್ನೋ ಒಂದು ಶಬ್ದವನ್ನ ಬಿಟ್ಟರೆ ಮತ್ತಿನ್ನೇನನ್ನೂ ಈ ವಿದೇಶಿಗರು ಹೇಳೋದಿಲ್ಲ.

ಇನ್ನೂ ವಿಶೇಷ ಅಂದರೆ ಈ ವಿಡಿಯೋದಲ್ಲಿ ಭಾರತೀಯ ಮೂಲದವರು ಎನಿಸೋ ಮಹಿಳೆಯೊಬ್ಬರು ಕಾಣಿಸಿಕೊಂಡಿದ್ದಾರೆ. ಹಾಡಿನ ಶುರುವಿನಿಂದ ಕೊನೆಯವರೆಗೂ ವಿಡಿಯೋದಲ್ಲಿ ಕಾಣಿಸೋ ಇವರು ಬಲವಂತವಾಗಿ ಕ್ಯಾಮರಾಗೆ ಪೋಸ್​ ಕೊಟ್ಟಂತೆ ಕಾಣ್ತಿದೆ.

ಹಾಡಿನ ತಲೆ ಬುಡ ಅರ್ಥವಾಗ್ದೇ ಇದ್ರೂ ಸಹ ಈ ವಿಡಿಯೋ 1.6 ದಶಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಕಾಮೆಂಟ್​ ಮಾಡಿದವರಲ್ಲಿ ಬಹುತೇಕರು ಆ ಕಂದು ಬಣ್ಣದ ಮಹಿಳೆಗೆ ಏನಾಗಿದೆ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...