alex Certify ವೈರಲ್​ ಆಯ್ತು ಕಮಲಾ ಹ್ಯಾರಿಸ್​ ರೇನ್ ಡಾನ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್​ ಆಯ್ತು ಕಮಲಾ ಹ್ಯಾರಿಸ್​ ರೇನ್ ಡಾನ್ಸ್….!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿರೋ ಭಾರತೀಯ ಮೂಲದ ಕಮಲಾ ಹ್ಯಾರೀಸ್​ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಫ್ಲೋರಿಡಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡ್ತಿರೋ ವೇಳೆ ಕಮಲಾ ಮಳೆಯಲ್ಲಿ ನೃತ್ಯ ಮಾಡೋ ಮೂಲಕ ಸುದ್ದಿಯಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ರ್ಯಾಲಿ ವೇಳೆ ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ರು. ಇದೀಗ ಕಮಲಾ ಕೂಡ ಮಳೆಯಲ್ಲಿ ಕೊಡೆ ಹಿಡಿದು ನೃತ್ಯ ಮಾಡೋ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಟಾಕ್​ ಆಫ್​ ದ ಟೌನ್​ ಆಗಿದ್ದಾರೆ.

ಡೆಮಾಕ್ರಟಿಕ್​ ಪಕ್ಷದಿಂದ ಜೋ ಬಿಡೆನ್​ ಅವರು ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದ್ರೆ ಭಾರತೀಯ ಮೂಲದ ಕಮಲಾ ಹ್ಯಾರೀಸ್​ ಉಪಾಧ್ಯಕ್ಷ ಸ್ಥಾನದ ರೇಸ್​ನಲ್ಲಿದ್ದಾರೆ. ಒಂದು ಈ ವೇಳೆ ಈ ಬಾರಿಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷ ಗೆದ್ದರೆ ಕಮಲಾ ಅಮೆರಿಕದ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದ ಮೊದಲ ಏಷಿಯನ್​ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಫ್ಲೋರಿಡಾದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಕಮಲಾ, ನಾವು ಯಾವಾಗ ಮತ ಚಲಾಯಿಸುತ್ತಿವೋ ಆಗ ಗೆಲ್ಲುತ್ತೇವೆ ಅಂತಾ ಹೇಳಿದ್ರು. ಇದಾದ ಬಳಿಕ ಮಳೆಯಲ್ಲಿ ಕೆಲ ಕಾಲ ನೃತ್ಯ ಮಾಡಿದ ಅವ್ರು, ಈ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಹ್ಯಾರಿಸ್​ ‘ಮಳೆ ಇರಲಿ ಬಿಸಿಲಿರಲಿ, ಡೆಮಾಕ್ರಸಿ ಯಾರಿಗೂ ಕಾಯಲ್ಲ’ ಅಂತಾ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...