ನವದೆಹಲಿ: ರೋಲರ್ ಸ್ಕೇಟಿಂಗ್ ಕಟ್ಟಿಕೊಂಡು ನಿಂತುಕೊಳ್ಳುವುದೇ ಕಷ್ಟ. ಅಂಥಾದ್ದರಲ್ಲಿ 30 ಸೆಕೆಂಡ್ ನಲ್ಲಿ 147 ಕ್ಕೂ ಅಧಿಕ ಬಾರಿ ಸ್ಕಿಪ್ಪಿಂಗ್ ಮಾಡಿದ ದೆಹಲಿಯ ವ್ಯಕ್ತಿ ಹೊಸ ದಾಖಲೆ ಬರೆದಿದ್ದಾರೆ.
ದೆಹಲಿಯ ಝೋರಾವರ್ ಸಿಂಗ್ ಈ ಹೊಸ ದಾಖಲೆ ಮಾಡಿ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಹೆಸರು ಸೇರಿಸಲು ಅರ್ಹರಾಗಿದ್ದಾರೆ. ರಾಯಿಟರ್ಸ್ ಟ್ವಿಟರ್ ಖಾತೆಯಲ್ಲಿ ಅವರ ಸ್ಕಿಪ್ಪಿಂಗ್ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಸಿಂಗ್ ಸಾಧನೆಗೆ ಹಲವರು ಭೇಷ್ ಹೇಳಿದ್ದಾರೆ.
ಸಿಂಗ್ ತಮ್ಮ 13 ನೇ ವರ್ಷದಲ್ಲಿ ಡಿಸ್ಕಸ್ ಥ್ರೋನಲ್ಲಿ ಭಾಗವಹಿಸಿದ್ದಾಗ ಅವರ ಸೊಂಟದ ಮೂಳೆ ಜಾರಿತ್ತು. ಹಲವು ವಾರ ವಿಶ್ರಾಂತಿ ಪಡೆದ ನಂತರ ಅವರು ಕಾಂಪಿಟೇಟಿವ್ ಜಂಪ್ ರೋಪ್ ಸ್ಪರ್ಧೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಅಂತಾರಾಷ್ಟ್ರೀಯ ಜಂಪ್ ರೋಪ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದರು. ಅಲ್ಲಿ ಹಲವರು ಜಂಪ್ ರೋಪ್ ಬಳಸಿ ಗಿನ್ನೆಸ್ ರೆಕಾರ್ಡ್ ಮಾಡುವುದನ್ನು ನೋಡಿ ಸ್ಫೂರ್ತಿ ಪಡೆದ ಸಿಂಗ್ ತಾವೂ ಜಂಪ್ ರೋಪ್ ಬಳಸಿ ದಾಖಲೆ ಬರೆದಿದ್ದಾರೆ ಎಂದು ಗಿನ್ನೆಸ್ ವಿವರಿಸಿದೆ.