ಮಧ್ಯಪ್ರದೇಶದ ಮೊರೆನ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಶಿಕ್ಷಕ ತಂದೆಯೊಬ್ಬ ಪವಿತ್ರ ಸಂಬಂಧಕ್ಕೆ ಕಳಂಕ ತಂದಿದ್ದಾನೆ. ಅಪ್ರಾಪ್ತ ಮಗಳ ಕೈಕಾಲು ಕಟ್ಟಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಹೋದರಿ ಸಹಾಯ ಪಡೆದ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಘಟನೆಯಲ್ಲಿ ತಂದೆ-ತಾಯಿ ಇಬ್ಬರೂ ಅಪರಾಧವೆಸಗಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಮನೆಯಲ್ಲಿ ಕೂಡಿ ಹಾಕಿ ಮಗಳ ಮೇಲೆ ಅತ್ಯಾಚಾರ ನಡೆಸಲಾಗಿದೆ.
ಪೀಡಿತೆ ಅಕ್ಕ ಈ ಬಗ್ಗೆ ತಿಳಿದು ತಂಗಿಗೆ ಸಹಾಯ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೀಡಿತೆಗೆ ರಕ್ಷಣೆ ನೀಡಿದ್ದಾರೆ.