alex Certify ನೋಡುಗರಿಗೆ ಮುದ ನೀಡುತ್ತೆ ಮಂಗನಾಟದ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರಿಗೆ ಮುದ ನೀಡುತ್ತೆ ಮಂಗನಾಟದ ಈ ವಿಡಿಯೋ

ಆಡು ಮಾತಿನಲ್ಲಿ ಹೇಳುವ ಮಂಗನಾಟ ಇಲ್ಲಿ ನಿಜವಾಗಿ ಕಾಣಸಿಗುತ್ತದೆ‌. ಕೋತಿಯೊಂದು ಜಿಂಕೆಯ ಮೇಲೆ ಸವಾರಿ ಮಾಡುವ ವಿಡಿಯೋವನ್ನು
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗಿದೆ.

ಸುಸ್ತಾಗಿದ್ದ ಕೋತಿಯು ಜಿಂಕೆಯ ಮೈ ಮೇಲೆ ಹಾರಿ ಆರಾಮವಾಗಿ ಸ್ವಲ್ಪ ದೂರ ಸವಾರಿ ಮಾಡುತ್ತದೆ. ಆಮೇಲೆ ಜಿಂಕೆ‌, ಕೋತಿಯನ್ನು ಕೆಳಗೆ ಇಳಿಸಲು ಮುಂದಾದರೂ ಅದು ಇಳಿಯುವುದಿಲ್ಲ. ಈ ಮಂಗನಾಟದ ವಿಡಿಯೋ ಈಗ ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ.

ವಿಡಿಯೋ ಅಪ್ ಲೋಡ್ ಮಾಡಿದ ಸ್ವಲ್ಪ ಸಮಯದಲ್ಲೇ 28 ಸಾವಿರ ಜನರು ನೋಡಿದ್ದಾರೆ. “ನಮಗೂ ಆಯಾಸವಾದಾಗ ಬೆನ್ನು ಕೊಡಲು ಇಂಥ ಸ್ನೇಹಿತರು ಇದ್ದರೆ ಎಷ್ಟು ಚೆಂದ” ಎಂದು ಒಬ್ಬರು ಬರೆದರೆ, “ಸಣ್ಣವರಿದ್ದಾಗ ಓದಿದ ಕಥೆಯೇ ನಿಜವಾದ ಹಾಗಿದೆ” ಎಂದು ಇನ್ನೊಬ್ಬರು ಬರೆದಿದ್ದಾರೆ.

ಸ್ವಲ್ಪ ದಿನದ ಹಿಂದೆ ಕೋತಿಯೊಂದು ಗಾಳಿಪಟ ಹಾರಿಸುತ್ತಿದ್ದ ವಿಡಿಯೋ ಮತ್ತು ಕೇಕ್ ಅನ್ನು ಕದ್ದು ಓಡುವ ಕೋತಿಯ ವಿಡಿಯೋ ವೈರಲ್ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

https://twitter.com/susantananda3/status/1252097369404870657?ref_src=twsrc%5Etfw%7Ctwcamp%5Etweetembed%7Ctwterm%5E1252097369404870657&ref_url=https%3A%2F%2Fwww.timesnownews.com%2Fthe-buzz%2Farticle%2Fmonkey-takes-ride-on-deer-cab-hilarious-video-goes-viral%2F581139

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...