alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಯ್ತು ಆಲೂ ಫೋಟೋ

potato

ಈ ಆಲೂಗಡ್ಡೆ ಫೋಟೋ ನೋಡಿ. ಇದರಲ್ಲೇನು ವಿಶೇಷ ಕಾಣ್ತಿಲ್ಲ. ಆದ್ರೆ ಈ ಫೋಟೋ ಮಾರಾಟವಾದ ಬೆಲೆ ಕೇಳಿದ್ರೆ, ನಿಮಗೆ ಆಶ್ಚರ್ಯವಾಗುತ್ತೆ. ವಿಶ್ವದ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಫೋಟೋಗಳ ಸಾಲಿಗೆ ಇದು ಕೂಡ ಸೇರ್ಪಡೆಯಾಗಿದೆ.

ವರದಿ ಪ್ರಕಾರ 6.76 ಕೋಟಿ ರೂ. ಗೂ ಹೆಚ್ಚು ಬೆಲೆಗೆ ಈ ಆಲೂಗಡ್ಡೆ ಫೋಟೋ ಮಾರಾಟವಾಗಿದೆ. ಪೊಟೋಟೋ#345 ಎಂಬ ಹೆಸರಿನ ಈ ಫೋಟೋವನ್ನು Kevin Avis ಸೆರೆ ಹಿಡಿದಿದ್ದಾರೆ. ಛಾಯಾಚಿತ್ರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಕೆವಿನ್. ಸೆಲೆಬ್ರಿಟಿಗಳು ಇವರಿಂದ ಫೋಟೋ ತೆಗೆಸಿಕೊಂಡು 1.5- 5 ಲಕ್ಷದವರೆಗೆ ಫೀಸ್ ನೀಡ್ತಾರೆ.

ಕೆವಿನ್ ಅವರಿಗೆ ಆಲೂಗಡ್ಡೆ ಎಂದ್ರೆ ಇಷ್ಟವಂತೆ. ಆಲೂಗಡ್ಡೆ ಮನುಷ್ಯನಂತೆ, ಒಂದೊಂದೂ ಬೇರೆಯಾಗಿರುತ್ತದೆ. ಒಂದೇ ಜಾತಿಗೆ ಸೇರಿದ್ದರೂ ತನ್ನದೆ ಗುರುತನ್ನು ಹೊಂದಿದೆ. ಹಾಗಾಗಿ ಇದನ್ನು ಇಷ್ಟಪಡುವ ಕೆವಿನ್ ಆಲುಗಡ್ಡೆಯ ಅನೇಕ ಫೋಟೋಗಳನ್ನು ತೆಗೆದಿದ್ದಾರೆ.

ಅವರ ಅಭಿಮಾನಿಗಳಲ್ಲೊಬ್ಬರು ಈ ಫೋಟೋವನ್ನು ಖರೀದಿಸಿದ್ದಾರಂತೆ. ಇದು ಕೆವಿನ್ ಸಂಗ್ರಹದಲ್ಲಿ ಅತ್ಯಂತ ಹೆಚ್ಚು ಬೆಲೆಗೆ ಮಾರಾಟವಾದ ಫೋಟೋ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...