alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಶಾಕ್ ನೀಡಿದ ಚಿನ್ನದ ದರ

A saleswoman checks the weight and quality of gold jewellery inside a showroom in Mumbai, August 13, 2015. REUTERS/Shailesh Andrade

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಸಿಕ್ಕಾಪಟ್ಟೆ ಜಾಸ್ತಿಯಾದ ಕಾರಣ ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುಗತಿಯಲ್ಲಿದ್ದು, ಒಂದೇ ದಿನ 10 ಗ್ರಾಂ ಗೆ 710 ರೂ. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನಕ್ಕೆ 28,000 ಗಡಿ ದಾಟಿದೆ.

ಕಳೆದ 8 ದಿನಗಳ ಅವಧಿಯಲ್ಲಿ 825 ರೂ ಏರಿಕೆಯಾಗುವ ಮೂಲಕ ಈ ವರ್ಷದಲ್ಲಿ ಅತ್ಯಂತ ಗರಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ ಹೆಚ್ಚಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1 ಔನ್ಸ್ ಗೆ 1200 ಡಾಲರ್ ಆಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣ. ಅಲ್ಲದೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಖರೀದಿ ಭರಾಟೆ ಜೋರಾಗಿದ್ದು, ಬೇಡಿಕೆ ಜಾಸ್ತಿಯಾಗಿರುವುದರಿಂದ ಬೆಲೆ ಏರುಗತಿಯಲ್ಲಿದೆ. ಡಾಲರ್ ಎದುರು ರೂಪಾಯಿ ಇಳಿಮುಖವಾಗಿರುವುದೂ ಚಿನ್ನ ಆಮದು ದುಬಾರಿಯಾಗಲು ಮತ್ತೊಂದು ಕಾರಣ ಎನ್ನಲಾಗಿದೆ.

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 1180 ರೂ. ಏರಿಕೆಯಾಗಿ, 37,000 ರೂ. ಗಡಿ ದಾಟಿದೆ. ದೆಹಲಿಯಲ್ಲಿ ಶೇ. 99.5 ಪರಿಶುದ್ಧ ಚಿನ್ನ 28,435 ರೂ., ಶೇ.99.9 ಪರಿಶುದ್ಧ ಚಿನ್ನ 28,585 ರೂ. ನಷ್ಟಿದೆ. ಮುಂದಿನ ದಿನಗಳಲ್ಲಿ ಚಿನ್ನ, ಬೆಳ್ಳಿ ದರ ಇನ್ನೂ ಏರಿಕೆಯಾಗಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...