alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಜ್ಜಾ, ಬರ್ಗರ್ ತಿಂದ್ರೆ ಹೆಚ್ಚಾಗುತ್ತೆ ಈ ನೋವು

junk_food_1492654907_749x421

ಜಂಕ್ ಫುಡ್ ಪ್ರಿಯರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ಅದು-ಇದು ಕಾರಣಕ್ಕೆ ಎರಡು-ಮೂರು ದಿನಕ್ಕೆ ಜಂಕ್ ಫುಡ್ ತಿನ್ನೋರು ಎಚ್ಚರ. ಇದು ಚಯಾಪಚಯ ಸಮಸ್ಯೆ ಜೊತೆಗೆ ಮೊಣಕಾಲು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಆರೋಗ್ಯ ಸಂಬಂಧ ನಡೆದ ಹೊಸ ಅಧ್ಯಯನವೊಂದು ಈ ವಿಷಯವನ್ನು ತಿಳಿಸಿದೆ. ಅಧ್ಯಯನದ ವರದಿ ಪ್ರಕಾರ ಜಂಕ್ ಫುಡ್ ಸೇವನೆ ಮಾಡಿದ್ರೆ ಕೀಲು ನೋವು ಕಾಡುತ್ತದೆಯಂತೆ. ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ನಡೆದ ಅಧ್ಯಯನದ ಪ್ರಕಾರ ಪಿಜ್ಜಾ, ಬರ್ಗರ್, ಚಿಪ್ಸ್, ಫ್ರೆಂಚ್ ಫ್ರೈಸ್ ಎಲ್ಲ ಜಂಕ್ ಫುಡ್ ಸಾಲಿಗೆ ಸೇರುತ್ತೆ. ಈ ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬಿದ್ದು, ಇದು ಸಂಧಿವಾತಕ್ಕೆ ಕಾರಣವಾಗುತ್ತದೆ.

ಇಲಿಗಳ ಮೇಲೆ ಈ ಪ್ರಯೋಗ ಮಾಡಲಾಗಿದ್ದು, ಜಂಕ್ ಫುಡ್ ತಿಂದ ಇಲಿಗಳ ತೂಕ ಹೆಚ್ಚಾಗಿದ್ದಲ್ಲದೆ ಲಿವರ್ ಗೆ ಸಂಬಂಧಿಸಿದ ಖಾಯಿಲೆಗಳು ಕಾಣಿಸಿಕೊಂಡಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...