HomeKarnatakaBIG NEWS: ತೆಂಗಿನಗುಂಡಿಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹಾರಿಸಿದ್ದ ಹನುಮ ಧ್ವಜ ಮತ್ತೆ ತೆರವು

BIG NEWS: ತೆಂಗಿನಗುಂಡಿಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹಾರಿಸಿದ್ದ ಹನುಮ ಧ್ವಜ ಮತ್ತೆ ತೆರವು

ಕಾರವಾರ: ಭಟ್ಕಳದ ತೆಂಗಿನಗುಂಡಿ ಬೀಚ್ ಸರ್ಕಲ್ ಬಳಿ ಸಂಸದ ಅನಂತ್ ಕುಮಾರ್ ಹೆಗಡೆ ಹಾರಿಸಿದ್ದ ಹನುಮ ಧ್ವಜವನ್ನು ತೆರವುಗೊಳಿಸಲಾಗಿದೆ.

ಅನಂತ್ ಕುಮಾರ್ ಹೆಗಡೆ ಹಲವು ಹುಂದೂ ಮುಖಂಡರ ಸಮ್ಮುಖದಲಿ ಧ್ವಜ ಕಟ್ಟೆಯ ಮೇಲೆ ಹನುಮ ಧ್ವಜ ಹಾರಿಸಿದ್ದರು. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ 21 ಜನರ ವಿರುದ್ಧ ದೂರು ದಾಖಲಾಗಿತ್ತು. ಅಲ್ಲದೇ ಸಾವರ್ಕರ್ ನಾಮಫಲಕವನ್ನೂ ಅಳವಡಿಸಿದ್ದರು. ಇದೀಗ ಗ್ರಾಮ ಪಂಚಾಯಿತಿ ರಾತ್ರೋ ರಾತ್ರಿ ಹನುಮ ಧ್ವಜ ತೆರವು ಮಾಡಿದೆ.

ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಎರಡು ಕೆ ಎಸ್ ಆರ್ ಪಿ ತುಕಡಿ ಹಾಗೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular