ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತು ಇಂದಿನಿಂದ ( ಫೆಬ್ರವರಿ 21 ) ಆರಂಭವಾಗಿದ್ದು, ಈ ಸುತ್ತಿನ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆರಿಸಿಕೊಂಡಿತ್ತು. ಹೀಗೆ ಟಾಸ್ ಆಗುತ್ತಿದ್ದಂತೆ ಆಗಮಿಸಿದ ಮಳೆರಾಯ 9 ಗಂಟೆ ಕಳೆದರೂ ನಿಲ್ಲಲಿಲ್ಲ. ಬಿಡುವು ಕೊಡದೇ ಸುರಿದ ಮಳೆಗೆ 8 ಗಂಟೆ 10 ನಿಮಿಷದಿಂದಲೇ ಓವರ್ ಕಡಿತಗೊಳ್ಳಲು ಶುರುವಾಯಿತು. 10.16ಕ್ಕೆ 5 ಓವರ್ ಪಂದ್ಯ ನಡೆಸಲು ಗಡುವು ನಿರ್ಧಾರವಾಗಿತ್ತು. ಆದರೆ 9.15 ಆದರೂ ಮಳೆ ನಿಲ್ಲದ ಕಾರಣ ಮಳೆ ನಿಂತು ಪಿಚ್ ಒಣಗಿ 10.16ರೊಳಗೆ ಪಂದ್ಯ ಆರಂಭಿಸುವುದು ಅಸಾಧ್ಯ ಎಂಬುದು ತಿಳಿಯುತ್ತಿದ್ದಂತೆ ಪಂದ್ಯವನ್ನು ರದ್ದು ಎಂದು ಘೋಷಿಸಲಾಗಿದೆ.
ಈ ಮೂಲಕ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕ ಲಭಿಸಿದೆ. ಹೀಗೆ ಸೂಪರ್ 8 ಸುತ್ತಿನ ಮೊದಲ ಪಂದ್ಯವೇ ಮಳೆಯಿಂದಾಗಿ ರದ್ದಾಗಿದ್ದು, ಪಂದ್ಯಕ್ಕಾಗಿ ಕಾದು ಕುಳಿತಿದ್ದ ಕ್ರಿಕೆಟ್ ಪ್ರಿಯರಿಗೆ ಭಾರೀ ನಿರಾಸೆಯುಂಟಾಗಿದೆ.
ಪಾಕಿಸ್ತಾನ ಆಡುವ ಬಳಗ: ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯ್ಯೂಬ್, ಸಲ್ಮಾನ್ ಆಘಾ (ನಾಯಕ), ಬಾಬರ್ ಆಝಂ, ಫಖರ್ ಜಮಾನ್, ಉಸ್ಮಾನ್ ಖಾನ್ (ವಿಕೆಟ್‌ಕೀಪರ್), ಶದಾಬ್ ಖಾನ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಸಲ್ಮಾನ್ ಮಿರ್ಜಾ, ಉಸ್ಮಾನ್ ತಾರಿಕ್
ನ್ಯೂಜಿಲೆಂಡ್ ಇನ್ನಿಂಗ್ಸ್: ಟಿಮ್ ಸೀಫರ್ಟ್ (ವಿಕೆಟ್‌ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್‌ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಜೇಮ್ಸ್ ನೀಶಾಮ್, ಮ್ಯಾಟ್ ಹೆನ್ರಿ, ಇಶ್ ಸೋಧಿ, ಲಾಕಿ ಫರ್ಗ್ಯೂಸನ್

