ಬೆಂಗಳೂರು: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಒಲಿದು ಬಂದಿದೆ. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು (Kichcha’s Kings Bengaluru) ತಂಡವು ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಭಾರತದ ಏಕೈಕ ಫಾರ್ಮುಲಾ-1 ರೇಸ್ ಟ್ರ್ಯಾಕ್ ಆಗಿರುವ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್ ನಲ್ಲಿ ನಡೆದ ರೇಸಿಂಗ್ ಸ್ಪರ್ಧೆಯಲ್ಲಿ ಬೆಂಗಳೂರು ತಂಡ ಟ್ರೋಫಿ ಗೆದ್ದು ಸಂಭ್ರಮಿಸಿದೆ.
ವಿಶೇಷವೆಂದರೆ, ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಗೆಲುವು ಲಭಿಸಿರುವುದು ಕನ್ನಡಿಗರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ಕೆಂಪು-ಹಳದಿ ಶಾಲು ಹೊದಿಸಿ ವಿಜೇತರಿಗೆ ಗೌರವ
ತಂಡದ ಗೆಲುವಿನ ಸಂಭ್ರಮದ ಸಂದರ್ಭದಲ್ಲಿ ಗೌತಮ್ ಬುದ್ಧ ನಗರ ಪೊಲೀಸ್ ಆಯುಕ್ತೆ ಹಾಗೂ ಎಡಿಜಿ ಲಕ್ಷ್ಮಿ ಸಿಂಗ್ ಅವರು ವಿಜೇತರಿಗೆ ಸಾಂಪ್ರದಾಯಿಕ ಕೆಂಪು-ಹಳದಿ ಕನ್ನಡ ಶಾಲು ಹೊದಿಸಿ ಗೌರವಿಸಿದರು.
ಕನ್ನಡ ನಾಡಿನ ಬಾವುಟದ ಬಣ್ಣಗಳಾದ ಕೆಂಪು ಮತ್ತು ಹಳದಿ ಶಾಲಿನೊಂದಿಗೆ ವಿಜೇತರನ್ನು ಸನ್ಮಾನಿಸಿರುವುದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ವೇದಿಕೆಯಲ್ಲಿ ಮಿಂಚಿದ ಬೆಂಗಳೂರಿನ ರುಹಾನ್ ಆಳ್ವ
ಈ ಗೆಲುವಿನಲ್ಲಿ ಬೆಂಗಳೂರಿನ ರುಹಾನ್ ಆಳ್ವ ಅವರ ಸಾಧನೆ ವಿಶೇಷ ಗಮನ ಸೆಳೆದಿದೆ. ರೇಸಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ವೇದಿಕೆಯಲ್ಲಿ ಮಿಂಚಿದ ಅವರು ಕನ್ನಡಿಗರ ಹೆಮ್ಮೆಗೆ ಪಾತ್ರರಾಗಿದ್ದಾರೆ.
ರುಹಾನ್ ಆಳ್ವ ಅವರ ಸಾಧನೆ ಹಾಗೂ ತಂಡದ ಚಾಂಪಿಯನ್ ಪಟ್ಟವು ರಾಜ್ಯದ ಮೋಟಾರ್ ಸ್ಪೋರ್ಟ್ಸ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
‘ಈ ಗೆಲುವು ಪ್ರತಿಯೊಬ್ಬ ಕನ್ನಡಿಗನಿಗೆ ಸಮರ್ಪಣೆ’
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಸುಪ್ರಿಯನ್ವಿ ಪಿಕ್ಚರ್ ಸ್ಟುಡಿಯೋ, ಕಿಚ್ಚನ ಕಿಂಗ್ಸ್ ಬೆಂಗಳೂರು ತಂಡದ ಈ ಗೆಲುವು ಪ್ರತಿಯೊಬ್ಬ ಕನ್ನಡಿಗನಿಗೆ ಸಮರ್ಪಿತವಾಗಿದೆ ಎಂದು ಹೇಳಿದೆ.
‘ನಮ್ಮ ಬಾವುಟ, ನಮ್ಮ ಹೆಮ್ಮೆ, ನಮ್ಮ ಗೆಲುವು’ ಎಂಬ ಸಂದೇಶದೊಂದಿಗೆ ಕನ್ನಡ ರಾಜ್ಯೋತ್ಸವದಂದು ಲಭಿಸಿದ ಈ ಸಾಧನೆಯನ್ನು ಸಂಭ್ರಮಿಸಲಾಗಿದೆ.
ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಕಿಚ್ಚನ ಕಿಂಗ್ಸ್ ಬೆಂಗಳೂರು ತಂಡದ ಗೆಲುವು ಮತ್ತಷ್ಟು ಮೆರುಗು ನೀಡಿದ್ದು, ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಸಂಭ್ರಮದ ಕ್ಷಣವಾಗಿ ಗುರುತಿಸಿಕೊಂಡಿದೆ.
ಪ್ರಿಯಾ ಸುದೀಪ್ ಪ್ರತಿಕ್ರಿಯೆ
ಭಾರತದ ಏಕೈಕ F1 ಟ್ರ್ಯಾಕ್ ಆಗಿರುವ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಕರ್ನಾಟಕ ರಾಜ್ಯೋತ್ಸವದಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡವು ಇಂಡಿಯನ್ ರೇಸಿಂಗ್ ಲೀಗ್ ಅನ್ನು ಗೆದ್ದಿದೆ.
ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡವು IRL ರೇಸ್ ವಿಜೇತರು ಮತ್ತು ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಕರ್ನಾಟಕ ರಾಜ್ಯೋತ್ಸವದಲ್ಲಿ ಗೆದ್ದಿರುವುದು ಇನ್ನಷ್ಟು ಸಿಹಿಯಾಗಿದೆ.
ಗೌತಮ್ ಬುದ್ಧ ನಗರದ ADG ಮತ್ತು ಪೊಲೀಸ್ ಆಯುಕ್ತೆ ಲಕ್ಷ್ಮಿ ಸಿಂಗ್ ಟ್ರೋಫಿಯನ್ನು ಹಸ್ತಾಂತರಿಸುತ್ತಿದ್ದಂತೆ ವಿಜೇತರಿಗೆ ಕೆಂಪು ಮತ್ತು ಹಳದಿ ಬಣ್ಣದ ಕರ್ನಾಟಕದ ಶಾಲು ನೀಡಲಾಯಿತು, ಕರ್ನಾಟಕದ ಬಣ್ಣಗಳಲ್ಲಿ ವೇದಿಕೆಯ ಮೇಲೆ ನಮ್ಮ ಬೆಂಗಳೂರಿನ ಹುಡುಗ ರುಹಾನ್ ಆಳ್ವಾ ಅವರನ್ನು ನೋಡುವುದು ಹೆಮ್ಮೆಯ ಕ್ಷಣವಾಗಿತ್ತು.
ನಾವು ಈ ಗೆಲುವನ್ನು ಕರ್ನಾಟಕದ ಜನರಿಗೆ ಅರ್ಪಿಸುತ್ತೇವೆ. ಬೆಂಗಳೂರಿನ ಬಗ್ಗೆ ಹೆಮ್ಮೆ, ಕರ್ನಾಟಕದ ಬಗ್ಗೆ ಹೆಮ್ಮೆ, ಕನ್ನಡಿಗ ಎಂದು ಹೆಮ್ಮೆ. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡವು ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಕರ್ನಾಟಕ ರಾಜ್ಯೋತ್ಸವದಲ್ಲಿ ಇಂಡಿಯನ್ ರೇಸಿಂಗ್ ಲೀಗ್ ಅನ್ನು ಗೆದ್ದಿದೆ – ಭಾರತದ ಏಕೈಕ F1 ಟ್ರ್ಯಾಕ್.
ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡವು IRL ರೇಸ್ ವಿಜೇತರು ಮತ್ತು ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಕರ್ನಾಟಕ ರಾಜ್ಯೋತ್ಸವದಲ್ಲಿ ಗೆದ್ದಿರುವುದು ಇನ್ನಷ್ಟು ಸಿಹಿಯಾಗಿದೆ ಎಂದು ಪ್ರಿಯಾ ಸುದೀಪ್ ಟ್ವೀಟ್ ಮಾಡಿದ್ದಾರೆ.

