HomeLatest Newsಮೈದಾನದಲ್ಲಿ ನಡೀತು ಮಾತಿನ ಚಕಮಕಿ: ಜಿಂಬಾಬ್ವೆ ಆಟಗಾರನಿಗೆ 'ಫ್ಲೈಯಿಂಗ್ ಕಿಸ್' ನೀಡಿ ಟ್ರೋಲ್ ಮಾಡಿದ ರಶೀದ್...

ಮೈದಾನದಲ್ಲಿ ನಡೀತು ಮಾತಿನ ಚಕಮಕಿ: ಜಿಂಬಾಬ್ವೆ ಆಟಗಾರನಿಗೆ ‘ಫ್ಲೈಯಿಂಗ್ ಕಿಸ್’ ನೀಡಿ ಟ್ರೋಲ್ ಮಾಡಿದ ರಶೀದ್ ಖಾನ್!

ಆಫ್ಘಾನಿಸ್ತಾನ್‌ನ ಪ್ರಸಿದ್ಧ ಲೆಗ್ ಸ್ಪಿನ್ನರ್ ರಶೀದ್ ಖಾನ್ ಹಾಗೂ ಜಿಂಬಾಬ್ವೆ ಬ್ಯಾಟರ್ ರಯಾನ್ ಬರ್ಲ್ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಮತ್ತು ತದನಂತರ ರಶೀದ್ ನೀಡಿದ ವಿಶಿಷ್ಟ ಪ್ರತಿಕ್ರಿಯೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಪಂದ್ಯದ ಪ್ರಥಮ ಇನ್ನಿಂಗ್ಸ್‌ನ 9ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ರಶೀದ್ ಖಾನ್ ಎಸೆದ ಫುಲ್ಲರ್ ಲೆಂಗ್ತ್ ಚೆಂಡನ್ನು ರಯಾನ್ ಬರ್ಲ್ ಲೆಗ್ ಸೈಡ್‌ಗೆ ಬಾರಿಸಲು ಯತ್ನಿಸಿ ವಿಫಲರಾದರು. ಈ ವೇಳೆ ರಶೀದ್ ಖಾನ್ ಕೆಲವು ಮಾತುಗಳನ್ನು ಹೇಳಿದ್ದು, ಇದರಿಂದ ಕೋಪಗೊಂಡ ರಯಾನ್ ಬರ್ಲ್ ರಶೀದ್ ಅವರತ್ತ ಆಕ್ರಮಣಕಾರಿಯಾಗಿ ನುಗ್ಗಿ ಬಂದರು. ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಡೆಯಲು ಅಂಪೈರ್‌ಗಳು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಬೇಕಾಯಿತು. ಬರ್ಲ್ ತೀವ್ರ ಕೋಪದಲ್ಲಿದ್ದರೂ ರಶೀದ್ ಖಾನ್ ಮಾತ್ರ ಕೇವಲ ಮುಗುಳ್ನಗುತ್ತಾ ಶಾಂತವಾಗಿ ನಿಂತಿದ್ದರು.

ಆದರೆ ನಿಜವಾದ ಡ್ರಾಮಾ ನಡೆದಿದ್ದು ಮರು ಓವರ್‌ನಲ್ಲಿ! ಅಬ್ದುಲ್ಲಾ ಅಹ್ಮದ್‌ಝೈ ಎಸೆತದಲ್ಲಿ ರಯಾನ್ ಬರ್ಲ್ ಕ್ಯಚ್ ನೀಡಿ ಔಟ್ ಆಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ, ರಶೀದ್ ಖಾನ್ ಅವರಿಗೆ ಸತತವಾಗಿ ‘ಫ್ಲೈಯಿಂಗ್ ಕಿಸ್’ (Flying Kisses) ನೀಡುವ ಮೂಲಕ ಟಾಂಗ್ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಖಣದಲ್ಲಿ ನಡೆದ ಈ ತಮಾಷೆಯ ಹಾಗೂ ರಸವತ್ತಾದ ಘಟನೆಯ ವಿಡಿಯೋವನ್ನು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ರಶೀದ್ ಖಾನ್ ಅವರ ಕೂಲ್ ರಿಯಾಕ್ಷನ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular