ನವದೆಹಲಿ : ಗರ್ಭಕಂಠ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಬಲ ಸಿಕ್ಕಿದ್ದು, ಕೇಂದ್ರ ಸರ್ಕಾರ 62 ಕೋಟಿ ಅನುದಾನ ಘೋಷಣೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಪ್ರಧಾನಿ ಮೋದಿ ಅವರು ವಸುಧೈವ ಕುಟುಂಬಕಂ ತತ್ವಗಳನ್ನು ಅಳವಡಿಸಿಕೊಂಡು ‘ಒಂದು ಭೂಮಿ ಒಂದು ಆರೋಗ್ಯ’ ಯೋಜನೆಯ ಮೂಲಕ ಇಂದು ಭಾರತವನ್ನು ವಿಶ್ವಕ್ಕೆ ಸಲಹೆಗಾರನಾಗುವ ಸ್ಥಾನಕ್ಕೆ ತಂದು ನಿಲ್ಲಿಸಿರುವುದು ಹೆಮ್ಮೆಯ ಸಂಗತಿ. ಇಂಡೋ ಪೆಸಿಫಿಕ್ ವಲಯದಲ್ಲಿ ಗರ್ಭಕಂಠ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಮೋದಿ ಸರ್ಕಾರವು ಮಹತ್ವದ ಈ ಜಾಗತಿಕ ಕಾರ್ಯಕ್ಕೆ ₹62 ಕೋಟಿ ಅನುದಾನ ಘೋಷಿಸಿದೆ ಎಂದು ಹೇಳಿದೆ.
ಹೆಮ್ಮೆಯ ಪ್ರಧಾನಿ ಶ್ರೀ @narendramodi ಅವರು ವಸುಧೈವ ಕುಟುಂಬಕಂ ತತ್ವಗಳನ್ನು ಅಳವಡಿಸಿಕೊಂಡು 'ಒಂದು ಭೂಮಿ ಒಂದು ಆರೋಗ್ಯ' ಯೋಜನೆಯ ಮೂಲಕ ಇಂದು ಭಾರತವನ್ನು ವಿಶ್ವಕ್ಕೆ ಸಲಹೆಗಾರನಾಗುವ ಸ್ಥಾನಕ್ಕೆ ತಂದು ನಿಲ್ಲಿಸಿರುವುದು ಹೆಮ್ಮೆಯ ಸಂಗತಿ.
ಇಂಡೋ ಪೆಸಿಫಿಕ್ ವಲಯದಲ್ಲಿ ಗರ್ಭಕಂಠ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಬಲ ತುಂಬುವ… pic.twitter.com/5qinU4JicI
— BJP Karnataka (@BJP4Karnataka) September 24, 2024

