HomeKarnatakaಬೆಂಗಳೂರಲ್ಲಿ 'ನಮ್ಮ ಮೆಟ್ರೋ' ಹಳಿಗೆ ಇಳಿದ ಪ್ರಯಾಣಿಕ ! 10 ನಿಮಿಷ ರೈಲು ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರಲ್ಲಿ ‘ನಮ್ಮ ಮೆಟ್ರೋ’ ಹಳಿಗೆ ಇಳಿದ ಪ್ರಯಾಣಿಕ ! 10 ನಿಮಿಷ ರೈಲು ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶುಕ್ರವಾರ (ಅಕ್ಟೋಬರ್ 30) ಬೆಳಗ್ಗೆ ಕೆಲಕಾಲ ತೊಂದರೆ ಎದುರಾಯಿತು. ಪ್ರಯಾಣಿಕನೊಬ್ಬನ ಎಡವಟ್ಟಿನಿಂದ ಪರ್ಪಲ್ ಲೈನ್‌ನಲ್ಲಿ ಮೆಟ್ರೋ ಸಂಚಾರ ವ್ಯತ್ಯಯಗೊಂಡು, ಪ್ರಯಾಣಿಕರು ಪರದಾಡುವಂತಾಯಿತು.

ಬೆಂಗಳೂರಿನ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ರವಿಕಾಂತ್ ಎಂಬ ಯುವಕನ ಟೋಕನ್‌ ಆಕಸ್ಮಿಕವಾಗಿ ಮೆಟ್ರೋ ಹಳಿಯ ಮೇಲೆ ಬಿದ್ದಿದೆ. ಅದನ್ನು ಸಿಬ್ಬಂದಿಗೆ ತಿಳಿಸಿ ಪಡೆಯುವ ಬದಲು, ಆತ ತಾನೇ ಹಳಿಗೆ ಇಳಿದು ಟೋಕನ್‌ ತರಲು ಮುಂದಾಗಿದ್ದಾನೆ.

ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗ್ಗೆ ಸುಮಾರು 9.22ರ ವೇಳೆಗೆ ಈ ಘಟನೆ ನಡೆದಿದ್ದು, ಪ್ರಯಾಣಿಕ ಹಳಿಗೆ ಇಳಿದಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ (ETS) ಮತ್ತು ಎಮರ್ಜೆನ್ಸಿ ಸ್ಟಾಪ್ ಪ್ಲಂಜರ್ (ESP) ಅನ್ನು ಸಕ್ರಿಯಗೊಳಿಸಿದ್ದಾರೆ. ಇದರಿಂದ ಮೆಟ್ರೋ ರೈಲುಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.

ಬಳಿಕ ಹಳಿಗೆ ಇಳಿದಿದ್ದ ಪ್ರಯಾಣಿಕನನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ. ಘಟನೆಯಿಂದ ಪರ್ಪಲ್ ಲೈನ್‌ನಲ್ಲಿ ರೈಲು ಸಂಚಾರ ಸುಮಾರು 10 ನಿಮಿಷಗಳ ಕಾಲ ವಿಳಂಬವಾಗಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಾಗುವುದನ್ನು ತಪ್ಪಿಸಲು ಹಸಿರು ಮಾರ್ಗದ ಕೆಲವು ರೈಲುಗಳ ಸಂಚಾರವನ್ನೂ ನಿಯಂತ್ರಿಸಲಾಗಿದೆ.

9.40ಕ್ಕೆ ಸಹಜ ಸ್ಥಿತಿಗೆ ಮರಳಿದ ಸಂಚಾರ

ಕೆಂಪೇಗೌಡ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಬೆಳಗ್ಗೆ 9.40ರ ವೇಳೆಗೆ ಪರ್ಪಲ್ ಮತ್ತು ಹಸಿರು ಮಾರ್ಗಗಳಲ್ಲಿನ ರೈಲು ಸಂಚಾರ ಮತ್ತೆ ಸಹಜ ಸ್ಥಿತಿಗೆ ಮರಳಿತು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.

ಪ್ರಯಾಣಿಕರಿಗೆ ಮೆಟ್ರೋ ಸಿಬ್ಬಂದಿ ಎಚ್ಚರಿಕೆ

ಮೆಟ್ರೋ ಹಳಿಗಳ ಮೇಲೆ ಮೊಬೈಲ್, ಕೀಲಿ, ಟೋಕನ್ ಸೇರಿದಂತೆ ಯಾವುದೇ ವಸ್ತುಗಳು ಬಿದ್ದರೆ ಅವುಗಳನ್ನು ತರಲು ಪ್ರಯಾಣಿಕರು ಸ್ವತಃ ಹಳಿಗೆ ಇಳಿಯಬಾರದು. ಬದಲಾಗಿ ತಕ್ಷಣ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕ ಸಿಬ್ಬಂದಿಯೇ ವಸ್ತುಗಳನ್ನು ಮರಳಿ ಪಡೆಯುವ ವ್ಯವಸ್ಥೆ ಮಾಡುತ್ತಾರೆ ಎಂದು ಮೆಟ್ರೋ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಹಕಾರ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಧಾರವಾಡ : ಸಹಕಾರ ರತ್ನ ಪ್ರಶಸ್ತಿ ನೀಡುವ ಸಲುವಾಗಿ 2026ನೇ ಸಾಲಿನ ಅರ್ಹರಾದ ಸಹಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಹಕಾರ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ನಿಷ್ಕಳಂಕ ಸೇವೆ ಸಲ್ಲಿಸಿರುವ, ಧಾರವಾಡ ಜಿಲ್ಲೆಯಲ್ಲಿಯ ನಿವಾಸಿಗಳು ತಮ್ಮ ವೈಯಕ್ತಿಕ ಪರಿಚಯ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವಿವರ, ಸಹಕಾರ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ವಿವರ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ, ಧಾರವಾಡ ಅಥವಾ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ನಿ, ಇವರಿಗೆ ನವೆಂಬರ್ 03, 2026 ರೊಳಗಾಗಿ ಸಲ್ಲಿಸಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular