HomeKarnatakaBREAKING: ಫಲಿತಾಂಶ ಬಂದ ದಿನವೇ ದುರಂತ: ಬಾವಿಯಲ್ಲಿ ಈಜಲು ಹೋಗಿ SSLC ವಿದ್ಯಾರ್ಥಿ ಸಾವು

BREAKING: ಫಲಿತಾಂಶ ಬಂದ ದಿನವೇ ದುರಂತ: ಬಾವಿಯಲ್ಲಿ ಈಜಲು ಹೋಗಿ SSLC ವಿದ್ಯಾರ್ಥಿ ಸಾವು

ಕೋಲಾರ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೊಬ್ಬ ಬಾವಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೊಣ್ಣವಾಡಿ ಗ್ರಾಮದಲ್ಲಿ ನಡೆದಿದೆ.

15 ವರ್ಷದ ಕಿರಣ್ ಮೃತ ಬಾಲಕ. ಇಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದೆ. ಎಸ್.ಎಸ್.ಎಲ್.ಸಿಯಲ್ಲಿ ಪಾಸ್ ಆಗಿದ್ದಕ್ಕೆ ಕಿರಣ್ ಸಂಭ್ರಮಿಸಿದ್ದ. ಅಲ್ಲದೇ ಕುಟುಂಬದವರು, ಸ್ನೇಹಿತರೊಂದಿಗೂ ಸಂತಸ ಹಂಚಿಕೊಂಡಿದ್ದ. ಬಳಿಕ ಬಿಸಿಲ ಝಳವಿರುವುದರಿಂದ ಎಂದಿನಂತೆ ಸ್ನೇಹಿತರೊಂದಿಗೆ ಈಜಲು ಬಾವಿಗೆ ತೆರಳಿದ್ದಾನೆ.

ಆಳವಾದ ಬಾವಿಯಲ್ಲಿ ಈಜಲು ಹೋಗಿ ಕಿರಣ್ ನಾಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಶೋಧಕಾರ್ಯಾಚರಣೆ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular