HomeLatest Newsಐಪಿಎಲ್ 2027 ಬಿಗ್ ಟ್ರೇಡ್: ಪಂಜಾಬ್‌ಗೆ ಹಾರ್ದಿಕ್ ಪಾಂಡ್ಯ? ಬದಲಾಗಿ ಮುಂಬೈ ಇಂಡಿಯನ್ಸ್‌ಗೆ ಅರ್ಷದೀಪ್ ಸಿಂಗ್!

ಐಪಿಎಲ್ 2027 ಬಿಗ್ ಟ್ರೇಡ್: ಪಂಜಾಬ್‌ಗೆ ಹಾರ್ದಿಕ್ ಪಾಂಡ್ಯ? ಬದಲಾಗಿ ಮುಂಬೈ ಇಂಡಿಯನ್ಸ್‌ಗೆ ಅರ್ಷದೀಪ್ ಸಿಂಗ್!

ಐಪಿಎಲ್ 2027ರ ಹರಾಜು ಪ್ರಕ್ರಿಯೆ ಹಾಗೂ ಆಟಗಾರರ ಉಳಿಸಿಕೊಳ್ಳುವಿಕೆ (ರಿಟೆನ್ಷನ್) ಗಡುವಿಗೆ ಮುನ್ನವೇ ಐಪಿಎಲ್ ಅಂಗಳದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಭಾರತದ ಆಲ್‌ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಮಾಡಲು ಎರಡೂ ಫ್ರಾಂಚೈಸಿಗಳು ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ.

ಹಾರ್ದಿಕ್ ಪಾಂಡ್ಯ ಪಂಜಾಬ್‌ಗೆ ಸೇರ್ಪಡೆ? ರಿಕಿ ಪಾಂಟಿಂಗ್ ಮುಖ್ಯ ತರಬೇತುದಾರರಾಗಿರುವ ಪಂಜಾಬ್ ಕಿಂಗ್ಸ್ ತಂಡವು ತನ್ನ ಪಡೆಯಲ್ಲಿ ಅನುಭವಿ ಪಂದ್ಯ ಗೆಲ್ಲಿಸಬಲ್ಲ ಆಲ್‌ರೌಂಡರ್ ಪಡೆಯಲು ತೀವ್ರ ಆಸಕ್ತಿ ತೋರಿಸಿದೆ. ಮುಂಬೈ ಇಂಡಿಯನ್ಸ್‌ನ ಹಿರಿಯ ಅಧಿಕಾರಿಯೊಬ್ಬರು ಮೊದಲ ಬಾರಿಗೆ ಈ ವಿಷಯವಾಗಿ ಪಂಜಾಬ್ ತಂಡವನ್ನು ಸಂಪರ್ಕಿಸಿದ್ದು, ಅದಕ್ಕೆ ಪಂಜಾಬ್ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಬದಲಾಗಿ ಮುಂಬೈ ಪಾಲಾಗಲಿದ್ದಾರೆ ಅರ್ಷದೀಪ್ ಮತ್ತು ವಿಷ್ಣು ವಿನೋದ್ ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟುಕೊಡಲು ಪ್ರತಿಯಾಗಿ ಮುಂಬೈ ಇಂಡಿಯನ್ಸ್, ಪಂಜಾಬ್ ತಂಡದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ವಿನೋದ್ ಅವರನ್ನು ಕೇಳಿದೆ. ಭಾರತದ ಪ್ರಮುಖ ಎಡಗೈ ವೇಗಿಯಾಗಿರುವ ಅರ್ಷದೀಪ್ ಅವರ ಸೇರ್ಪಡೆಯು ಮುಂಬೈ ಇಂಡಿಯನ್ಸ್‌ನ ಬೌಲಿಂಗ್ ವಿಭಾಗಕ್ಕೆ ಬಿಗ್ ಬೂಸ್ಟ್ ನೀಡಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶೀಘ್ರದಲ್ಲೇ ಅಧಿಕೃತ ಘೋಷಣೆ ಸಾಧ್ಯತೆ ಎರಡೂ ಫ್ರಾಂಚೈಸಿಗಳ ಹಿರಿಯ ಆಡಳಿತ ಮಂಡಳಿಗಳು ಈ ಒಪ್ಪಂದಕ್ಕೆ ಬಹುತೇಕ ಒಪ್ಪಿಗೆ ಸೂಚಿಸಿದ್ದು, ಅಗತ್ಯ ದಾಖಲಾತಿ ಪ್ರಕ್ರಿಯೆಗಳನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಲು ಸಿದ್ಧತೆ ನಡೆಸಿವೆ. ನವೆಂಬರ್ 17ರ ರಿಟೆನ್ಷನ್ ಡೆಡ್‌ಲೈನ್‌ಗೂ ಮುನ್ನ ಈ ಬಿಗ್ ಟ್ರೇಡ್ ಆಫರ್ ಅಧಿಕೃತವಾಗಿ ಹೊರಬೀಳುವ ಸಾಧ್ಯತೆಯಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular