HomeKarnatakaBIG NEWS : SSLC ಸ್ಕ್ಯಾನ್ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನ ; ಇಂದಿನಿಂದಲೇ...

BIG NEWS : SSLC ಸ್ಕ್ಯಾನ್ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನ ; ಇಂದಿನಿಂದಲೇ ಪ್ರಕ್ರಿಯೆ ಆರಂಭ !

ಲಕ್ಷಾಂತರ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ.ಎಂದಿನಂತೆ ಈ ವರ್ಷವೂ ಬಾಲಕಿಯರು ಬಾಲಕರಿಗಿಂತ ಹೆಚ್ಚಿನ ಫಲಿತಾಂಶದೊಂದಿಗೆ ಮೇಲುಗೈ ಸಾಧಿಸಿದ್ದು, ಜಿಲ್ಲಾವಾರು ಪಟ್ಟಿಯಲ್ಲಿ ದಕ್ಷಿಣ ಕನ್ನಡ (ಶೇ. 98.4) ಜಿಲ್ಲೆ ಪ್ರಥಮ ಸ್ಥಾನ ಪಡೆದು ಮುನ್ನಡೆ ಕಾಯ್ದುಕೊಂಡಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಅಂಕಗಳ ಕುರಿತು ಅಸಮಾಧಾನವಿರುವ ಅಥವಾ ತಮ್ಮ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಮಹತ್ವದ ಪ್ರಕಟಣೆ ಹೊರಡಿಸಿದೆ. ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇಂದಿನಿಂದಲೇ (ಏಪ್ರಿಲ್ 23) ಚಾಲನೆ ನೀಡಲಾಗಿದೆ. ಫಲಿತಾಂಶದಲ್ಲಿ ನಿರೀಕ್ಷಿತ ಅಂಕ ಬಾರದೇ ಇದ್ದಲ್ಲಿ ಅಥವಾ ಮೌಲ್ಯಮಾಪನದ ಬಗ್ಗೆ ಸಂದೇಹವಿದ್ದಲ್ಲಿ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸ್ಕ್ಯಾನ್ ಪ್ರತಿ ಪಡೆಯಲು ಏಪ್ರಿಲ್ 26 ಕೊನೆಯ ದಿನಾಂಕವಾಗಿದೆ.ಫಲಿತಾಂಶವು ಏಪ್ರಿಲ್ 23, 2026 ರಂದು ಮಧ್ಯಾಹ್ನ 12:00 ಗಂಟೆಗೆ ಬಿಡುಗಡೆಯಾಗಿದೆ.


ಪರೀಕ್ಷಾ ಅಂಕಿ-ಅಂಶಗಳು

  • ಹಾಜರಾದ ವಿದ್ಯಾರ್ಥಿಗಳು: 8,56,516
  • ಉತ್ತೀರ್ಣರಾದವರು: 7,60,002
  • ಲಿಂಗಾವಾರು ಫಲಿತಾಂಶ (ನಿಯಮಿತ ವಿದ್ಯಾರ್ಥಿಗಳು):
    • ಬಾಲಕಿಯರು: 96.18%
    • ಬಾಲಕರು: 91.94%
  • ಪ್ರದೇಶವಾರು ಫಲಿತಾಂಶ:
    • ಗ್ರಾಮೀಣ: 94.80%
    • ನಗರ: 93.20%

ಜಿಲ್ಲಾವಾರು ಸಾಧನೆ

  • ಪ್ರಥಮ ಸ್ಥಾನ: ದಕ್ಷಿಣ ಕನ್ನಡ (98.4%)
  • ದ್ವಿತೀಯ ಸ್ಥಾನ: ಉಡುಪಿ (98.18%)
  • ತೃತೀಯ ಸ್ಥಾನ: ಉತ್ತರ ಕನ್ನಡ (98.09%)
  • ಕೊನೆಯ ಸ್ಥಾನ: ಕಲಬುರಗಿ (85.06%)

ಶಾಲಾವಾರು ಮತ್ತು ಮಾಧ್ಯಮವಾರು ಫಲಿತಾಂಶ

  • 100% ಫಲಿತಾಂಶ ಪಡೆದ ಶಾಲೆಗಳು: 6,176 ಶಾಲೆಗಳು ಶೇ.100 ರಷ್ಟು ಫಲಿತಾಂಶ ದಾಖಲಿಸಿವೆ.
  • ಶೂನ್ಯ ಫಲಿತಾಂಶ: 27 ಶಾಲೆಗಳಲ್ಲಿ ಒಬ್ಬರೂ ಉತ್ತೀರ್ಣರಾಗಿಲ್ಲ.
  • ಮಾಧ್ಯಮ: ತೆಲುಗು ಮಾಧ್ಯಮವು 96.77% ರೊಂದಿಗೆ ಗರಿಷ್ಠ ಸಾಧನೆ ಮಾಡಿದೆ, ನಂತರ ಇಂಗ್ಲಿಷ್ (96.16%) ಮತ್ತು ಕನ್ನಡ (92.6%) ಮಾಧ್ಯಮಗಳಿವೆ.

ಟಾಪ್ ಅಂಕ ಗಳಿಸಿದವರು (Highest Marks)

  • 625 ಕ್ಕೆ 625 ಅಂಕ: 07 ವಿದ್ಯಾರ್ಥಿಗಳು.
  • 624 ಅಂಕ: 21 ವಿದ್ಯಾರ್ಥಿಗಳು.
  • 623 ಅಂಕ: 28 ವಿದ್ಯಾರ್ಥಿಗಳು.

ಮರುಮೌಲ್ಯಮಾಪನ ಮತ್ತು ಸ್ಕ್ಯಾನ್ ಪ್ರತಿ ಪಡೆಯುವ ವಿಧಾನ

ಫಲಿತಾಂಶದಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಕೆಳಗಿನ ಅವಕಾಶಗಳಿವೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ಸ್ಕ್ಯಾನ್ ಪ್ರತಿಗಾಗಿ ಅರ್ಜಿ: ಏಪ್ರಿಲ್ 23 ರಿಂದ ಏಪ್ರಿಲ್ 26 ರವರೆಗೆ (ಶುಲ್ಕ: ಪ್ರತಿ ವಿಷಯಕ್ಕೆ ₹410).
  2. ಮರುಮೌಲ್ಯಮಾಪನಕ್ಕೆ ಅರ್ಜಿ: ಏಪ್ರಿಲ್ 28 ರಿಂದ ಮೇ 4 ರವರೆಗೆ (ಶುಲ್ಕ: ಪ್ರತಿ ವಿಷಯಕ್ಕೆ ₹810).

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 (SSLC Exam-2) ಮಾಹಿತಿ

ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ಅಥವಾ ಅಂಕ ಸುಧಾರಿಸಿಕೊಳ್ಳಲು ಇಚ್ಛಿಸುವವರಿಗಾಗಿ ಪರೀಕ್ಷೆ-2 ನಡೆಯಲಿದೆ.

  • ಅರ್ಜಿ ಸಲ್ಲಿಸಲು ಪ್ರಾರಂಭ: 24-04-2026
  • ಕೊನೆಯ ದಿನಾಂಕ: 30-04-2026
  • ಶುಲ್ಕ ವಿನಾಯಿತಿ: ಪರೀಕ್ಷೆ-1ರಲ್ಲಿ ‘Not Completed’ ಫಲಿತಾಂಶ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ-2ಕ್ಕೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು DigiLocker ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular