alex Certify ಪತ್ನಿ ಸಾಗರಿಕಾ ಜೊತೆ ದೇವಿ ದರ್ಶನ ಪಡೆದ ಜಹೀರ್ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಸಾಗರಿಕಾ ಜೊತೆ ದೇವಿ ದರ್ಶನ ಪಡೆದ ಜಹೀರ್ ಖಾನ್

ಟೀಂ ಇಂಡಿಯಾದ ಮಾಜಿ ಆಟಗಾರ ಜಹೀರ್ ಖಾನ್, ಪತ್ನಿ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಜೊತೆ ದೇವರ ದರ್ಶನ ಮಾಡಿದ್ದಾರೆ. ಜಾರ್ಖಂಡ್‌ನ ಸಿದ್ಧಪೀಠ್ ರಾಜರಪ್ಪದಲ್ಲಿರುವ ಚಿನ್ನಮಾಸ್ತಿಕೆ ದೇವಸ್ಥಾನಕ್ಕೆ ಜಹೀರ್ ಖಾನ್ ಭೇಟಿ ನೀಡಿದ್ದರು.

ಜಹೀರ್ ಖಾನ್ ಚಿನ್ನಮಾಸ್ತಿಕೆ ದೇವಸ್ಥಾನದಲ್ಲಿ ಪತ್ನಿ ಸಾಗರಿಕಾ ಘಾಟ್ಗೆ ಜೊತೆ ಪೂಜೆ ಸಲ್ಲಿಸಿದರು. ಜಹೀರ್ ಖಾನ್ ಬರ್ತಿದ್ದಾರೆಂಬ ಸುದ್ದಿ ಕೇಳಿ ದೇವಾಲಯದ ಆವರಣದಲ್ಲಿ ಜನಸಾಗರವೇ ನೆರೆದಿತ್ತು. ಜಹೀರ್ ಖಾನ್ ಮತ್ತು ಪತ್ನಿ ದೇವಾಲಯದಲ್ಲಿ ಸುಮಾರು 15 ನಿಮಿಷಗಳ ಕಾಲ ಇದ್ದರು. ಪೂಜೆ ಸಲ್ಲಿಸಿ ಚಿನ್ನಮಾಸ್ತಿಕೆಯ ಆಶೀರ್ವಾದ ಪಡೆದ್ರು.

ಬಾಂಗ್ಲಾದೇಶ ನಡುವೆ ನಡೆಯಲಿರುವ ಸರಣಿಗೆ ಕೇನ್ ವಿಲಿಯಮ್ಸನ್ ಅಲಭ್ಯ

ಜಹೀರ್ ಖಾನ್ ಆಗಮನದ ಹಿನ್ನಲೆಯಲ್ಲಿ ದೇವಾಲಯದಲ್ಲಿ ಭದ್ರತೆ ಬಿಗಿಗೊಳಿಸಲಾಗಿತ್ತು. ಜಹೀರ್ ಖಾನ್ ಮತ್ತು ಸಾಗರಿಕಾ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡ್ರು. ಜಹೀರ್ ಖಾನ್ ಮತ್ತು ಅವರ ಪತ್ನಿ ಸಾಗರಿಕಾ ಘಾಟ್ಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾಂಚಿಗೆ ಬಂದಿದ್ದರು. ಚಿನ್ನಮಾಸ್ತಿಕೆ ದೇವಸ್ಥಾನಕ್ಕೆ ಭೇಟಿ ನೀಡುವ ಪತ್ನಿ ಆಸೆಯನ್ನು ಈಡೇರಿಸಿದ್ದೇನೆ. ಸಂತೋಷವಾಗಿದೆ ಎಂದು ಜಹೀರ್ ಖಾನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...