alex Certify ಸಂಭ್ರಮದಲ್ಲಿ ಮೈಮರೆತು ʼಕೊರೊನಾʼ ವಾರ್ನಿಂಗ್ ಗಾಳಿಗೆ ತೂರಿದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಭ್ರಮದಲ್ಲಿ ಮೈಮರೆತು ʼಕೊರೊನಾʼ ವಾರ್ನಿಂಗ್ ಗಾಳಿಗೆ ತೂರಿದ ಅಭಿಮಾನಿಗಳು

2019-20ರ ಐ-ಲೀಗ್‌ ಟ್ರೋಫಿಯನ್ನು ಕೋಲ್ಕತ್ತದ ಮೋಹನ್‌ ಬಗಾನ್‌ ತಂಡಕ್ಕೆ ಹಸ್ತಾಂತರ ಮಾಡಲಾಗಿದೆ. ಟೂರ್ನಿಯ ನಾಲ್ಕು ಸುತ್ತಿನ ಪಂದ್ಯಗಳು ಬಾಕಿ ಇರುವಂತೆಯೇ ಟ್ರೋಫಿ ಬುಟ್ಟಿಗೆ ಹಾಕಿಕೊಂಡ ಮೋಹನ್ ಬಗಾನ್‌ ಕಳೆದ ಮಾರ್ಚ್‌ 10ರಂದೇ ವಿಜಯಿಯಾಗಿತ್ತು.

ಆದರೆ ಕೊರೋನಾ ವೈರಸ್ ಕಾಟದಿಂದಾಗಿ ಟ್ರೋಫಿಗೆ ಮುತ್ತಿಕ್ಕುವ ಸಮಾರಂಭವನ್ನು ಏಳು ತಿಂಗಳ ಮಟ್ಟಿಗೆ ಮುಂದೂಡಬೇಕಾಗಿ ಬಂದಿತ್ತು. ಇದೇ ವೇಳೆ ಇಂಡಿಯನ್ ಸೂಪರ್‌ ಲೀಗ್ (ISL) ಸೇರಿಕೊಂಡ ಸಂತೋಷಕ್ಕಾಗಿ ಮೋಹನ್ ಬಗಾನ್‌ ತನ್ನ ಆಟಗಾರರು ಹಾಗೂ ಮ್ಯಾನೇಜ್‌ಮೆಂಟ್‌ಗೆ ವಿಶೇಷ ಸಮಾರಂಭವೊಂದನ್ನು ಏರ್ಪಡಿಸಿತ್ತು.

ಟ್ರೋಫಿಯನ್ನು ಕೈಯಲ್ಲಿ ಹಿಡಿದು ಮೋಹನ್ ಬಗಾನ್ ತಂಡವನ್ನು ಗೆಲುವಿನ ಮೆರವಣಿಗೆಯಲ್ಲಿ ಕೋಲ್ಕತ್ತಾದ ಬೀದಿಗಳಲ್ಲಿ ಕರೆದೊಯ್ಯವ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಕೋವಿಡ್-19 ವ್ಯಾಪಕ ಪ್ರಸರಣದ ರಿಸ್ಕ್‌ಗೆ ಎಕ್ಸ್‌ಪೋಸ್ ಆಗಿದ್ದಾರೆ. ಆರೋಗ್ಯ ಸಂಬಂಧ ನೀಡಲಾದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಅಭಿಮಾನಿಗಳು ಈ ಮಟ್ಟದಲ್ಲಿ ನೆರೆದಿರುವ ಚಿತ್ರಗಳು ವೈರಲ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...