alex Certify ಸ್ಕರ್ಟ್ ಧರಿಸಿ ವಿಂಬಲ್ಡನ್ ಟೆನಿಸ್ ಆಡಿದ್ದ ಪುರುಷ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕರ್ಟ್ ಧರಿಸಿ ವಿಂಬಲ್ಡನ್ ಟೆನಿಸ್ ಆಡಿದ್ದ ಪುರುಷ…!

ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ವಿಂಬಲ್ಡನ್ ಗ್ರ‍್ಯಾನ್ ಸ್ಲಾಂ ಅನ್ನು ರದ್ದು ಮಾಡಲಾಗಿದೆ. ಇದೇ ವೇಳೆ, ಈ ಐತಿಹಾಸಿಕ ಟೆನಿಸ್ ಕೂಟದ ಹಳೆಯ ನೆನಪುಗಳನ್ನು ಕ್ರೀಡಾಭಿಮಾನಿಗಳು ಮೆಲುಕು ಹಾಕುತ್ತಿದ್ದರು.

2017ರ ಕೂಟದ ಸಂದರ್ಭ ನಡೆದ ಸನ್ನಿವೇಶವೊಂದರಲ್ಲಿ, ಬೆಲ್ಜಿಯನ್ ತಾರೆ ಕಿಮ್ ಕ್ಲೈಸ್ಟರ್ಸ, ಮಹಿಳೆಯರ ಡಬಲ್ಸ್‌ ಫ್ರೆಂಡ್ಲಿ ಪಂದ್ಯವೊಂದರ ಸಂದರ್ಭದಲ್ಲಿ ಐರ್ಲೆಂಡ್‌ನ ಕ್ರಿಸ್ ಕಿನ್ ಎಂಬುವವರನ್ನು ತಮ್ಮೊಂದಿಗೆ ಬಂದು ಆಡಲು ಆಮಂತ್ರಿಸಿದ್ದರು. ಆಗ ಕ್ರಿಸ್ ಬಳಿ ಸಾಂಪ್ರದಾಯಿಕ ಬಿಳಿ ಉಡುಪು ಇಲ್ಲದೇ ಇದ್ದ ಕಾರಣದಿಂದ, ಕ್ಲೈಸ್ಟರ್ಸ್ ಖುದ್ದು ತಮ್ಮದೇ ಸ್ಕರ್ಟ್ ‌ಅನ್ನು ಕ್ರಿಸ್‌ಗೆ ತೊಡಿಸಿದರು.

ಈ ವೇಳೆ ಖುದ್ದು ಕಿಮ್ ‌ಗೇ ನಗು ತಡೆಯಲು ಸಾಧ್ಯವಾಗದೇ, ಕೋರ್ಟ್‌ನಲ್ಲೇ ಬಿದ್ದು ಹೊರಳಾಡಿಬಿಟ್ಟರು. ಈ ವಿಡಿಯೋ ಭಾರೀ ವೈರಲ್ ಆಗಿ ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು.

The Man In The Skirt | Pursuits: Episode 2

In 2017, a viral moment at The Championships with Kim Clijsters would change one fan’s life forever…#WimbledonRecreated

Posted by Wimbledon on Friday, July 3, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...