alex Certify 43ನೇ ವಯಸ್ಸಿನಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದ ರೋಹನ್ ಬೋಪಣ್ಣ; ಇಲ್ಲಿದೆ ಅವರ ಫಿಟ್ನೆಸ್‌ ಸೀಕ್ರೆಟ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

43ನೇ ವಯಸ್ಸಿನಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದ ರೋಹನ್ ಬೋಪಣ್ಣ; ಇಲ್ಲಿದೆ ಅವರ ಫಿಟ್ನೆಸ್‌ ಸೀಕ್ರೆಟ್‌…!

ಟೆನಿಸ್‌ ಅತ್ಯಂತ ಶ್ರಮದಾಯಕ ಆಟಗಳಲ್ಲೊಂದು. 40 ದಾಟಿದ ಮೇಲೆ ಟೆನಿಸ್‌ ಆಡುವುದು, ದೊಡ್ಡ ದೊಡ್ಡ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವುದು ಬಹಳ ಕಷ್ಟ. ಆದರೆ ಭಾರತದ ರೋಹನ್‌ ಬೋಪಣ್ಣ 43ನೇ ವಯಸ್ಸಿನಲ್ಲೂ ಆಸ್ಟ್ರೇಲಿಯನ್‌ ಓಪನ್‌ ಗೆಲ್ಲುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಈ ವಯಸ್ಸಿನಲ್ಲೂ ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದು ಬಹುದೊಡ್ಡ ಸವಾಲು. ಅದನ್ನು ಎದುರಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ ರೋಹನ್‌ ಬೋಪಣ್ಣ. ಇಷ್ಟು ದೊಡ್ಡ ಗೆಲುವಿನ ಹಿಂದಿರುವ ಫಿಟ್‌ನೆಸ್‌ ರಹಸ್ಯವನ್ನು ಖುದ್ದು ರೋಹನ್‌ ಹಂಚಿಕೊಂಡಿದ್ದಾರೆ.

ಯೋಗಾಸನ

ರೋಹನ್ ಬೋಪಣ್ಣಗೆ 2019ರಲ್ಲಿ ಮೊಣಕಾಲುಗಳಲ್ಲಿ ನೋವು ಶುರುವಾಗಿತ್ತು. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಅವರು ಯೋಗಾಸನ ಮಾಡಲು ಆರಂಭಿಸಿದರಂತೆ. ಮೊದಮೊದಲು ಪರಿಣಾಮ ಅಷ್ಟೇನೂ ಗೊತ್ತಾಗಿರಲಿಲ್ಲ. ಆದರೆ ಯೋಗಾಸನವೇ ನನ್ನನ್ನು ಫಿಟ್‌ ಮಾಡಿದೆ ಎಂದು ರೋಹನ್‌ ಹೇಳಿದ್ದಾರೆ.

ಸಮತೋಲಿತ ಆಹಾರ

ಆಹಾರದ ವಿಚಾರದಲ್ಲಿ ರೋಹನ್‌ ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಯಾವಾಗಲೂ ಸಮತೋಲನದಲ್ಲಿ ಇಡುತ್ತಾರೆ. ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಆಹಾರವನ್ನು ತೆಗೆದುಕೊಳ್ಳುವುದು ಅವರ ಫಿಟ್ನೆಸ್ ಮಂತ್ರವಾಗಿದೆ.

ದೇಹದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು

ರೋಹನ್ ಯಾವಾಗಲೂ ತಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ಎಲ್ಲವನ್ನೂ ಮಾಡುತ್ತಾರೆ. ದೇಹಕ್ಕೆ ಎಷ್ಟು ವಿಶ್ರಾಂತಿ ಬೇಕು ? ಎಷ್ಟು ಚೇತರಿಕೆಯ ಅಗತ್ಯವಿದೆ ? ಹೆಚ್ಚುವರಿ ಅಭ್ಯಾಸ ಬೇಕೇ ಎಂಬುದನ್ನೆಲ್ಲ ಅರಿತುಕೊಂಡೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಚಲನಶೀಲತೆ ಮತ್ತು ಚೇತರಿಕೆಯ ಮೇಲೆ ಗಮನ ಕೇಂದ್ರೀಕರಿಸುವುದು ಕ್ರೀಡಾಪಟುವಾಗಲು ಮೂಲಮಂತ್ರ ಎಂಬುದು ರೋಹನ್‌ ಸಲಹೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...