ಮುಂಬೈ: ಸಹ್ಯಾದ್ರಿ ತಪ್ಪಲಿನ ತಿರುವು ಮುರುವು ಹಾಗೂ ಘಟ್ಟ ಪ್ರದೇಶದಿಂದ ಕೂಡಿದ 91 ಕಿಮೀ ರಸ್ತೆಯಲ್ಲಿ ಅಂಧರೊಬ್ಬರು ಸೈಕಲ್ ಪ್ರಯಾಣ ಮಾಡಿ ಸಾಧನೆ ಮಾಡಿದ್ದಾರೆ.
ಟ್ರೈಥ್ಲೆಟ್ ನಿಕೇತ್ ದಲಾಲ್ ಸಹ್ಯಾದ್ರಿ ಕ್ಲಾಸಿಕ್ ಎಂಬ ಅಲ್ಟ್ರಾ ಕ್ಲೈಂಬಿಂಗ್ ಸೈಕಲ್ ರೇಸ್ ನಲ್ಲಿ ತಮ್ಮ ಸಹವರ್ತಿ 39 ವರ್ಷದ ಸ್ಪೀಚ್ ಥೆರಪಿಸ್ಟ್ ಅರ್ಹಂ ಶೇಖ್ ಅವರ ಜತೆಗೆ ಸೈಕಲ್ ತುಳಿದರು.
ದಲಾಲ್ 2020 ರಲ್ಲಿ ಐರೋಮನ್ ದುಬೈ 70.3 ಪೂರೈಸಿ ಹೆಸರು ಗಳಿಸಿದ್ದರು. ಈಗ ಜ.23 ರಂದು ಹೊಸ ಚಾಲೆಂಜ್ ನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪಸಾರ್ನಿ ಹಾಗೂ ಅಂಬೆನಲಿ ಘಾಟ್ ನಡುವೆ 32 ಕಿಮೀ ಕಠಿಣ ಮಾರ್ಗವಿತ್ತು.
ಫ್ರಾನ್ಸ್ ನ ವಿಶ್ವ ಪ್ರಸಿದ್ಧ ಲಾ- ಮಾರ್ಮೊತೆಗೆ ಸಹ್ಯಾದ್ರಿ ಕ್ಲಾಸಿಕ್ ಅಲ್ಟ್ರಾ ಕ್ಲೈಂಬಿಂಗ್ ಸೈಕಲ್ ರೇಸ್ ಹೋಲಿಸಲಾಗಿದೆ. 90 ಕಿಮೀಯಿಂದ 190 ಕಿಮೀ ವಿಭಾಗವನ್ನು ಪೂರೈಸುವುದು ವಿಶೇಷ ಚಾಲೆಂಜ್ ಆಗಿತ್ತು.